ಕರ್ನಾಟಕ

karnataka

ಪೊಲೀಸ್​ ಪರೀಕ್ಷೆಯಲ್ಲಿ ಮೊಬೈಲ್ ಡಿವೈಸರ್​ ಬಳಸಿ ನಕಲು: ಪ್ರಕರಣ ದಾಖಲು

By

Published : Nov 23, 2020, 1:31 PM IST

ಕೆಎಸ್​ಆರ್​ಪಿ ಮತ್ತು ಐಆರ್​ಬಿ ಕಾನ್ಸ್​ಟೇಬಲ್ ಪರೀಕ್ಷೆಯಲ್ಲಿ ಮೊಬೈಲ್ ಡಿವೈಸರ್​ ಬಳಸಿ ನಕಲು ಮಾಡುತ್ತಿದ್ದ ಅಭ್ಯರ್ಥಿಯೊಬ್ಬ ಸಿಕ್ಕಿಬಿದ್ದಿದ್ದು, ನವನಗರದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಾಸಾರ್ ತಿಳಿಸಿದ್ದಾರೆ.

Bagalkot
ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸಾರ್

ಬಾಗಲಕೋಟೆ: ಪೊಲೀಸ್​ ಇಲಾಖೆ ವತಿಯಿಂದ ನಡೆಸುವ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ತಂತ್ರಜ್ಞಾನ ಬಳಸಿ ನಕಲು ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಕೆಎಸ್​ಆರ್​ಪಿ ಮತ್ತು ಐಆರ್​ಬಿ ಕಾನ್ಸ್​ಟೇಬಲ್ ಪರೀಕ್ಷೆಯಲ್ಲಿ ಮೊಬೈಲ್ ಡಿವೈಸರ್​ ಬಳಸಿಕೊಂಡು ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸಾರ್ ತಿಳಿಸಿದ್ದಾರೆ.

ನಗರದ ವಿದ್ಯಾಗಿರಿಯ ಸಿಬಿಎಸ್​ಸಿ ಶಾಲಾ ಕೊಠಡಿಯಲ್ಲಿ ಭಾನುವಾರ ನಡೆಯುತ್ತಿದ್ದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಶ್ರೀಮಂತ ಸದಲಗಾ ಮೋಸದಿಂದ ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿಬಿದ್ದ ಅಭ್ಯರ್ಥಿಯಾಗಿದ್ದು, ಈತನನ್ನು ದಸ್ತಗಿರಿ ಮಾಡಲಾಗಿದೆ. ಈತನಿಗೆ ನೆರವು ನೀಡಿದವರನ್ನು ಸಹ ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾಗಿರಿಯ ಸಿಬಿಎಸ್​ಸಿ ಪಬ್ಲಿಕ್ ಶಾಲೆಯ ಬ್ಲಾಕ್ 464 ರಲ್ಲಿ ಶ್ರೀಮಂತ ಸದಲಗಾ ಎಂಬ ಅಭ್ಯರ್ಥಿ ತಾನು ಮುಖಕ್ಕೆ ಹಾಕಿಕೊಂಡ ಮಾಸ್ಕ್ ಒಳಗೆ ಎಲೆಕ್ಟ್ರಾನಿಕ್ಸ್ ಸಾಧನ ಅಳವಡಿಸಿಕೊಂಡಿದ್ದರು. ಅಲ್ಲದೇ ಕಿವಿಯೊಳಗೆ ಇದ್ದ ಮತ್ತೊಂದು ಸಾಧನ ಇಟ್ಟುಕೊಂಡು ಅದರ ಸಹಾಯದಿಂದ ಪ್ರಶ್ನೆ ಪತ್ರಿಕೆಯಲ್ಲಿ ಇರುವ ಪ್ರಶ್ನೆಗಳನ್ನು ಮತ್ತೊಬ್ಬರಿಗೆ ಓದಿ ಹೇಳಿ ಅವರಿಂದ ಉತ್ತರ ತಿಳಿದುಕೊಂಡು ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಈತನ ವಿರುದ್ಧ ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details