ಕರ್ನಾಟಕ

karnataka

ETV Bharat / state

ವಿಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿದಂತೆ 40ಕ್ಕೂ ಮಂದಿ ಅಸ್ವಸ್ಥ! - more than 40 people are unwell in Bagalkot

ರಾತ್ರಿಯಿಂದಲೇ ಮಕ್ಕಳು ಸೇರಿದಂತೆ ಇತರರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗಿನವರೆಗೆ ಒಟ್ಟು 48ಕ್ಕೂ ಅಧಿಕ ಜನರು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಇಂದು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಭೇಟಿ ನೀಡಿ, ಪುಟ್ಟ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ..

more than 40 people are unwell in Bagalkot
ವಿಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿದಂತೆ 40ಕ್ಕೂ ಮಂದಿ ಅಸ್ವಸ್ಥ

By

Published : Mar 23, 2022, 1:58 PM IST

ಬಾಗಲಕೋಟೆ :ವಿಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿದಂತೆ 40ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಡೋಮನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದರ್ಗಾವೊಂದರ ಉರುಸ್ ಆಚರಣೆ ಹಿನ್ನೆಲೆ ಪ್ರಸಾದವಾಗಿ ಅನ್ನ-ಸಾಂಬಾರ್‌ ಸೇವಿಸಿದ್ದರು. ಸಂಜೆ ಹೊತ್ತಿಗೆ ಮಕ್ಕಳಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿತ್ತು.

ವಿಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ..

ಅಸ್ವಸ್ಥರಾದವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದ್ದಂತೆ 5 ಆ್ಯಂಬುಲೆನ್ಸ್​ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ದಾಖಲಾದವರ ಚಿಕಿತ್ಸೆಗೆ 6 ಜನ ವೈದ್ಯರನ್ನು ನಿಯೋಜಿಸಲಾಗಿದೆ. ಅಸ್ವಸ್ಥರ ಪೈಕಿ ಯಾರಿಗೂ ಯಾವುದೇ ಪ್ರಾಣಾಪಾಯವಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಶ್ರೀಮತಿ ಜಯಶ್ರೀ ಎಮ್ಮಿ ತಿಳಿಸಿದ್ದಾರೆ.

ರಾತ್ರಿಯಿಂದಲೇ ಮಕ್ಕಳು ಸೇರಿದಂತೆ ಇತರರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗಿನವರೆಗೆ ಒಟ್ಟು 48ಕ್ಕೂ ಅಧಿಕ ಜನರು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಇಂದು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಭೇಟಿ ನೀಡಿ, ಪುಟ್ಟ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ.

ಇದನ್ನೂ ಓದಿ:ಎಸ್​ಸಿ ಪ್ರಮಾಣ ಪತ್ರ ನೀಡುವಂತೆ ಆಗ್ರಹ: ಶಂಸುದ್ದಿನ್ ಸರ್ಕಲ್ ಏರಿ ವ್ಯಕ್ತಿ ವಿಷ ಸೇವಿಸಲು ಯತ್ನ!

ABOUT THE AUTHOR

...view details