ಬಾಗಲಕೋಟೆ:ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗೆ ಬಂದಿರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಊಟದ ಕಿಟ್ ನೀಡುವ ಮೂಲಕ ಬ್ರಾಹ್ಮಣ ಸಮಾಜದ ಯುವಕರು ಮಾನವೀಯತೆ ಮೆರೆಯುತ್ತಿದ್ದಾರೆ.
ಸಂಕಲ್ಪ ಸೇವಾ ಪ್ರತಿಷ್ಠಾನ ಎಂದು ಸಂಘಟನೆ ಮಾಡಿಕೊಂಡು ಎಲ್ಲರೂ ಹಣ ಕೂಡಿಸಿ, ಪ್ರತಿ ನಿತ್ಯ 200 ಜನರಿಗೆ ಆಗುವ ಆಹಾರದ ಕಿಟ್ ಅನ್ನು ತೆಗೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಕೋವಿಡ್ ರೋಗಿಗಳು ಸೇರಿದಂತೆ ಅವರ ಸಂಬಂಧಿಕರು, ಊಟ ಮಾಡದೆ ಇರುವವರು , ಯಾರೇ ಇದ್ದರೂ, ಅವರನ್ನು ಕರೆದು ಊಟದ ಕಿಟ್ ನೀಡುತ್ತಾರೆ.
ಕಳೆದ ಮೂರು ದಿನಗಳಿಂದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಬೆಳ್ಳಗೆಯಿಂದ ಊಟಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು, ಎರಡು ಚಪಾತಿ, ಕಾಳು ಪಲ್ಯ, ಅನ್ನ ಹಾಗೂ ಊಪ್ಪಿನಕಾಯಿ ಇಟ್ಟು ಎಲ್ಲವೂ ಪ್ಯಾಕ್ ಮಾಡಿ, ಪ್ಲಾಸ್ಟಿಕ್ ಚೀಲ ಹಾಕಿಕೊಂಡು, ಚಿಕ್ಕ ವಾಹನದ ಮೂಲಕ ಕೇವಲ ಖಾಸಗಿ ಆಸ್ಪತ್ರೆಗಳಿಗೆ ಬಂದಿರುವ ರೋಗಿಗಳಿಗೆ ಮಾತ್ರ ಊಟವನ್ನು ವಿತರಿಸಿದ್ದಾರೆ.