ಬಾಗಲಕೋಟೆ:ನೆರೆ ಸಂತ್ರಸ್ತರಿಗೆ ಪರಿಹಾರಧನ ಹಾಗೂ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕು ತಹಶೀಲ್ದಾರ್ ಕಚೇರಿ ಎದುರು ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ.
ನಮಗೆ ಸೂರು ಕಲ್ಪಿಸಿ: ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರ ಅಳಲು
ಹತ್ತು ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದು, ಸರ್ಕಾರ ಕಣ್ಣು ತೆರೆದಿಲ್ಲ. ಸಂತ್ರಸ್ತರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಪ್ರತಿಭಟಿಸಿ ನೆರೆ ಸಂತ್ರಸ್ತರ ಅಳಲು
ಢವಳೇಶ್ವರ ಗ್ರಾಮದ 2009ರಲ್ಲಿ ಉಂಟಾದ ಪ್ರವಾಹ ಸಂದರ್ಭ ಮತ್ತು ಇತ್ತೀಚಿನ ಪ್ರವಾಹ ಸಂದರ್ಭಗಳಲ್ಲಿಯೂ ಢವಳೇಶ್ವರ ಗ್ರಾಮದಲ್ಲಿನ ಬಡವರಿಗೆ ಮಾತ್ರ ಅನ್ಯಾಯವಾಗಿದೆ. ಘಟಪ್ರಭಾ ನದಿಯ ಪ್ರವಾಹದ ಹಿನ್ನೆಲೆ ಗ್ರಾಮ ಸಂಪೂರ್ಣ ಮುಳುಗಿ ಹೋಗಿತ್ತು. ಹೀಗಾಗಿ ಸಾಕಷ್ಟು ಮನೆಗಳು ಬಿದ್ದು ಜನರ ಬದುಕು ಬೀದಿಗೆ ಬಂದಿತ್ತು. ಈ ಮಧ್ಯೆ ಸರ್ಕಾರ ತಕ್ಷಣ ಪರಿಹಾರ ನೀಡಿ ಮನೆಗಳ ಸರ್ವೇ ಕಾರ್ಯ ನಡೆಸಲು ಆರಂಭಿಸಿದಾಗ ಅಧಿಕಾರಿಗಳು ತಮಗಿಷ್ಟ ಬಂದತೆ ಮನೆಗಳ ಸರ್ವೇ ಕಾರ್ಯ ಮಾಡಿದ್ದಾರೆ ಎಂದು ಸಂತ್ರಸ್ತ ಮುಖಂಡ ಕಲ್ಲಪ್ಪ ಕಡಬಲ್ಲನವರ ಆರೋಪಿಸಿದ್ದಾರೆ.