ಕರ್ನಾಟಕ

karnataka

ETV Bharat / state

ಕೃಷ್ಣಾ ‌ನದಿ ತೀರದ ಜನತೆಗೆ ಪ್ರವಾಹ ಭೀತಿ! - ಹಿಪ್ಪರಗಿ ಜಲಾಶಯ

ಕೃಷ್ಣಾ ‌ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನ ನದಿ‌ ತೀರದ ಜನತೆಗೆ ಪ್ರವಾಹ ಭೀತಿ ಉಂಟಾಗಿದೆ.

By

Published : Aug 6, 2020, 2:36 PM IST

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಹಿಪ್ಪರಗಿ ಜಲಾಶಯದಲ್ಲಿ ಪ್ರಸ್ತುತ 520.70 ಮೀಟರ್ ನೀರು ಸಂಗ್ರಹ ಇದ್ದು, ಒಳ ಹರಿವು 87,500 ಕ್ಯೂಸೆಕ್​​ ಇದೆ. ಅಷ್ಟೇ ಪ್ರಮಾಣದಲ್ಲಿ ನೀರು ಹೂರಗೆ ಬಿಡಲಾಗುತ್ತದೆ.

ಹಿಪ್ಪರಗಿ ಜಲಾಶಯದಿಂದ ಚಿಕ್ಕಪ‌ಡಸಲಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಜಲಾಶಯಕ್ಕೆ ಸೇರಲಿದೆ. ಹೀಗಾಗಿ ಕೃಷ್ಣಾ ‌ನದಿ ತೀರದಲ್ಲಿ ನೀರು ಹೆಚ್ಚು‌ ಹರಿದು ಬರುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನ ನದಿ‌ ತೀರದ ಜನತೆಗೆ ಪ್ರವಾಹ ಭೀತಿ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳುತ್ತಿದೆ.

ABOUT THE AUTHOR

...view details