ಕರ್ನಾಟಕ

karnataka

ETV Bharat / state

Rain... Rain...Rain : ಕೃಷ್ಣಾ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ - ಕೃಷ್ಣಾ ನದಿ ಪಾತ್ರದಲ್ಲಿನ ಜನರಲ್ಲಿ ಪ್ರವಾಹ ಭೀತಿ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಯ್ನಾ ಜಲಾಶಯದ ಮೂಲಕ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ, ಜಮಖಂಡಿ ತಾಲೂಕಿನ ನದಿ ಪಾತ್ರದಲ್ಲಿನ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.

Bagalkot
ನಿರಂತರ ಮಳೆ: ಕೃಷ್ಣಾ ನದಿ ಪಾತ್ರದಲ್ಲಿನ ಜನರಲ್ಲಿ ಪ್ರವಾಹ ಭೀತಿ

By

Published : Jul 23, 2021, 11:12 AM IST

ಬಾಗಲಕೋಟೆ:ನಿರಂತರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ನಿರಂತರ ಮಳೆ: ಕೃಷ್ಣಾ ನದಿ ಪಾತ್ರದಲ್ಲಿನ ಜನರಲ್ಲಿ ಪ್ರವಾಹ ಭೀತಿ

ಮಹಾರಾಷ್ಟ್ರದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಯ್ನಾ ಜಲಾಶಯದ ಮೂಲಕ ಕೃಷ್ಣಾ ನದಿಗೆ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಬೆಳಿಗ್ಗೆ 1 ಲಕ್ಷ 12 ಸಾವಿರ ಕ್ಯೂಸೆಕ್​ ನೀರಿನ ಹೊರಬಿಡಲಾಗಿದೆ. ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ 1 ಲಕ್ಷ 13 ಸಾವಿರ ಕ್ಯೂಸೆಕ್​ ಇದೆ.

ಹೀಗಾಗಿ, ಚಿಕ್ಕಪಡಸಲಗಿ ಸೇತುವೆ ಬಳಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಸದ್ಯ ನದಿ ಪಾತ್ರದಲ್ಲಿನ ಜನರು ಸುರಕ್ಷಿತವಾಗಿದ್ದು, ಜಾಗೃತಿ ವಹಿಸಲು ಜಿಲ್ಲಾಡಳಿತದ ಸೂಚನೆ ನೀಡಿದೆ.

ABOUT THE AUTHOR

...view details