ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಕೃಷ್ಣಾ ಅಬ್ಬರಕ್ಕೆ ಬೆಳೆ ನೀರುಪಾಲು; ಸಂಕಷ್ಟದಲ್ಲಿ ಅನ್ನದಾತ - ಬಾಗಲಕೋಟೆ

ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಜಮಖಂಡಿ ಮತ್ತು ಮುಧೋಳ ತಾಲೂಕಿನ ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿವೆ. ಜತೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆ ನೀರು ಪಾಲಾಗಿದೆ.

several hectares of crop destroy in bagalkot
ಬಾಗಲಕೋಟೆಯಲ್ಲಿ ಕೃಷ್ಣೆಯ ಅಬ್ಬರಕ್ಕೆ ಬೆಳೆದ ಬೆಳೆ ನೀರು ಪಾಲು

By

Published : Jul 25, 2021, 2:53 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ‌ ಇಲ್ಲ. ಆದರೂ, ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಮಖಂಡಿ ಹಾಗೂ ಮುಧೋಳ ತಾಲೂಕಿನ ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿದೆ.

ಬೆಳೆದ ಬೆಳೆ ನೀರು ಪಾಲು: ಸೂಕ್ತ ಪರಿಹಾರಕ್ಕೆ ರೈತರ ಮನವಿ

ಇದರ ಜತೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನೀರು ಪಾಲಾಗಿದೆ. ಪ್ರಮುಖವಾಗಿ ಮುಧೋಳ, ಜಮಖಂಡಿ ತಾಲೂಕಿನಲ್ಲಿ ವಾಣಿಜ್ಯ ಬೆಳೆ ಕಬ್ಬು ಬೆಳೆಯಲಾಗುತ್ತದೆ. ಈಗ ಬರುವ ಹಂಗಾಮಿಗೆ ಕಬ್ಬು ಕಟಾವು ಮಾಡಿ ಕಾರ್ಖಾನೆ ಸಾಗಿಸಲು ಸಿದ್ದತೆಯಲ್ಲಿದ್ದ ರೈತರು ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ.

ಕೊರೊನಾ ತೊಂದರೆಗೆ ಒಳಗಾಗಿದ್ದ ರೈತರಿಗೆ ಪ್ರವಾಹ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಬ್ಬು, ಮೆಕ್ಕೆಜೋಳ ಹಾಗೂ ಅರಿಶಿಣ ಸೇರಿದಂತೆ ತೋಟಗಾರಿಕೆ ಬೆಳೆಗಾದ ದಾಳಿಂಬೆ, ಸೀಬೆ ಹಾಗೂ ಇತರ ಬೆಳೆಗಳು ನೀರು ಪಾಲಾಗಿವೆ. ಹಾನಿಯಾಗಿರುವ ಬೆಳೆಗಳಿಗೆ ಸರ್ಕಾರ ನೀಡುವ ಪರಿಹಾರಧನ ಅತಿ ಕಡಿಮೆ. ಅದಕ್ಕಾಗಿ ದಾಖಲಾತಿ ಕೊಟ್ಟು ಸುಸ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರಿಗೆ ಪ್ರವಾಹ ಬಂದರೆ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಕಣ್ಣಾರೆ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿಹೋಗುವುದನ್ನು ಕಂಡು ಮಮ್ಮಲ ಮರಗುತ್ತಿರುವ ರೈತರು ಸರ್ಕಾರ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details