ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಧಾರಾಕಾರ ಮಳೆ: ರಸ್ತೆ ಸಂಪರ್ಕ ಕಡಿತ - ಬಾಗಲಕೋಟೆ ಮಳೆ ನ್ಯೂಸ್

ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಮತ್ತೆ ಬಾಗಲಕೋಟಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ಪಾತ್ರದ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಎದುರಾಗಿದೆ.

heavy rain
ಬಾಗಲಕೋಟೆಯಲ್ಲಿ ಧಾರಾಕಾರ ಮಳೆ

By

Published : Jul 24, 2021, 11:16 AM IST

ಬಾಗಲಕೋಟೆ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಪರಿಣಾಮ, ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಮುಧೋಳ ತಾಲೂಕಿನ ಐತಿಹಾಸಿಕ ಹೊಳೆ ಬಸವೇಶ್ವರ ದೇವಾಲಯಕ್ಕೆ ನೀರು ನುಗ್ಗಿದೆ.

ಧಾರಾಕಾರ ಮಳೆ - ಆತಂಕದಲ್ಲಿ ಅನ್ನದಾತ

ಘಟಪ್ರಭಾ ನದಿಗೆ 1 ಲಕ್ಷ 10 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆ, ಮಾಚಕನೂರು ಹೊಳೆ ಬಸವೇಶ್ವರ ದೇವಾಲಯ ಜಲಾವೃತಗೊಂಡಿದೆ. ದೇವಾಲಯ ಅಲ್ಲದೇ, ಮಾಚಕನೂರು ಗ್ರಾಮದ ಸುತ್ತ-ಮುತ್ತ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಘಟಪ್ರಭಾ ಜಲಾಶಯ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಮತ್ತೆ ಘಟಪ್ರಭಾ ನದಿ ಪಾತ್ರದ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸಂಚಾರ ಬಂದ್:

ಕೊರೊನಾ ನಡುವೆ ಜಿಲ್ಲೆಯ ಜನತೆಯಲ್ಲಿ ಪ್ರವಾಹ ಭೀತಿ ಹೆಚ್ಚಾಗುತ್ತಿದೆ. ಹಲವೆಡೆ ಸೇತುವೆಗಳು ಜಲಾವೃತಗೊಂಡು ಸಂಚಾರ ಬಂದ್ ಆಗಿದೆ. ಮುಧೋಳ ತಾಲೂಕಿನ ಮಿರ್ಜಿ-ಅಕ್ಕಿಮರಡಿ, ಮಹಾಲಿಂಗಪೂರ-ಯಾದವಾಡ್, ನಂದಗಾವ್-ಮಹಾಲಿಂಗಪೂರ, ಒಂಟಗೊಡಿ - ಸೊರಗಾವ,ಡವಳೇಶ್ವರ -ಮಹಾಲಿಂಗಪೂರ ಸೇತುವೆ ಮುಳುಗಡೆ ಆಗಿದೆ. 9 ಗ್ರಾಮಗಳ ಸಂಪರ್ಕ ಕಡಿತವಾಗಿ, ಸುತ್ತುವರೆದು ಸಂಚಾರ ಮಾಡುವ ಸ್ಥಿತಿ ನಿರ್ಮಾಣ ವಾಗಿದೆ.

ಇದನ್ನೂ ಓದಿ:ತುಂಗಭದ್ರಾ ಜಲಾಶಯಕ್ಕೆ 75,008 ಕ್ಯೂಸೆಕ್ ನೀರು.. ಈ ವರ್ಷದಲ್ಲಿ ಇದೇ ಗರಿಷ್ಠ ಪ್ರಮಾಣದ ಒಳಹರಿವು

ಮಿರ್ಜಿ, ಮಲ್ಲಾಪೂರ, ಒಂಟಗೋಡಿ, ಚನಾಳ, ನಾಗರಾಳ, ಅಕ್ಕಿಮರಡಿ, ನಂದಗಾವ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಸಂಚಾರಕ್ಕೆ ಸ್ಥಳೀಯರು ಪರದಾಡುವಂತಾಗಿದೆ.

ABOUT THE AUTHOR

...view details