ಕರ್ನಾಟಕ

karnataka

ETV Bharat / state

ಕಲಾದಗಿ ಸೇತುವೆ ಕಾಮಗಾರಿಗೆ ₹ 5 ಕೋಟಿ: ಶಾಸಕ ನಿರಾಣಿ

ಬಾಗಲಕೋಟೆ ಜಿಲ್ಲೆಯ ಕಲಾದಗಿ ಹಾಗೂ ಅಂಗನವಾಡಿ ಸೇತುವೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

ಶಾಸಕಿ ಮುರುಗೇಶ ನಿರಾಣಿ

By

Published : Sep 4, 2019, 1:58 AM IST

ಬಾಗಲಕೋಟೆ:ಪ್ರವಾಹದಿಂದ ಹಾನಿಯಾಗಿರುವ ಕಲಾದಗಿ ಸೇತುವೆ ಕಾಮಗಾರಿಗೆ ₹ 5 ಕೋಟಿ, ಅಂಗನವಾಡಿ ಸೇತುವೆಗೆ ₹ 70 ಕೋಟಿ ನೀಡಲಾಗುವುದು. 20 ವರ್ಷಗಳಿಂದ ನನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಮುರಗೇಶ ನಿರಾಣಿ ಭರವಸೆ ನೀಡಿದರು.

ಶಾಸಕ ಮುರುಗೇಶ ನಿರಾಣಿ

ಜಿಲ್ಲೆಯ ಬೀಳಗಿಯ ಕಲಾದಗಿ ಗ್ರಾಮದಲ್ಲಿ ಶಾಸಕ ಮುರಗೇಶ ನಿರಾಣಿ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳಗಡೆ ಆಗುವ ಕಲಾದಗಿ ಗ್ರಾಮವು ಸಂಪೂರ್ಣ ಸ್ಥಳಾಂತರ ಮಾಡುವ ಬಗ್ಗೆ, ಪ್ರವಾಹದಿಂದ ತೊಂದರೆ ಉಂಟಾಗಿರುವ ಸೇತುವೆ ಹಾಗೂ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಿದರು.

ನೆರೆಗೆ ಸಂಬಂಧ ಪಟ್ಟ ಎಲ್ಲ ವ್ಯವಸ್ಥೆಯನ್ನು ಈಗಾಗಲೇ ಸರ್ಕಾರ ದಿಂದ ಮಾಡಲಾಗಿದೆ. ಗಂಜಿ ಕೇಂದ್ರ ಸೇರಿ ಆಹಾರ ಧಾನ್ಯಗಳ ವಿತರಣೆ ಮತ್ತು ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.ಯುಕೆಪಿ ವತಿಯಿಂದ ಸಂಪೂರ್ಣ ಸ್ಥಳಾಂತರ ಮಾಡುವ ಕಾರ್ಯ ಶೀಘ್ರವಾಗಿ ನಡೆಯಲಿದೆ ಎಂದು ಭರವಸೆ ನೀಡಿದರು.

ABOUT THE AUTHOR

...view details