ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿದ್ದು, ಐವರು ಕೋವಿಡ್ನಿಂದ ಗುಣಮುಖರಾಗಿ ಡಿಸ್ಚಾಜ್೯ ಆಗಿದ್ದಾರೆ.
ಬಾಗಲಕೋಟೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಇದರಿಂದ ಜಿಲ್ಲೆಯಲ್ಲಿ ಕೋವಿಡ್-19 ನಿಂದ ಗುಣಮುಖರಾದವರ ಸಂಖ್ಯೆ 88 ಕ್ಕೆ ಏರಿಕೆ ಆಗಿದೆ.ಮುಧೋಳ ತಾಲೂಕಿನ ತಿಮ್ಮಾಪೂರದ 28 ವರ್ಷದ ಮಹಿಳೆ ಪಿ-3413, ಬೀಳಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಪಿ-3664, ಪಿ-3666, ಪಿ-3667, ಬಾದಾಮಿ ತಾಲೂಕಿನ ಹುಲ್ಲಿಕೇರಿಯ ಪಿ-3665 ಆಸ್ಪತ್ರೆಯಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾಜ್೯ ಆಗಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟಿದ್ದಾರೆ. ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಿಸಿದ್ದಾರೆ.
ಒಂದೆಡೆ ಇದು ಸಮಾಧಾನದ ಸಂಗತಿ ಆಗಿದ್ದರೆ, ಮತ್ತೆ ಐದು ಜನರಿಗೆ ಕೋವಿಡ್ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಇದರಿಂದ ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆಯಾಗಿದೆ. ಗುಡೂರಿನ 32 ವರ್ಷದ ಮಹಿಳೆ ಪಿ-6042 (ಬಿಜಿಕೆ-97), 23 ವರ್ಷದ ಯುವಕ ಪಿ-6043 (ಬಿಜಿಕೆ-98), ಬಾದಾಮಿಯ 23 ವರ್ಷದ ಯುವತಿಗೆ ಪಿ-6044 (ಬಿಜಿಜೆ-99) ಕೋವಿಡ್ ದೃಢಪಟ್ಟಿದೆ.
ಜಿಲ್ಲೆಯಿಂದ ಕಳುಹಿಸಲಾದ ಬಾಕಿ 5 ಸ್ಯಾಂಪಲ್ ಪೈಕಿ 3 ಪಾಸಿಟಿವ್ ಬಂದಿದ್ದು, ಜಿಲ್ಲಾಡಳಿತ ಇನ್ನೂ 2 ಸ್ಯಾಂಪಲ್ ವರದಿ ನಿರೀಕ್ಷೆಯಲ್ಲಿದೆ. ಜಿಲ್ಲೆಯಿಂದ ಮತ್ತೆ ಹೊಸದಾಗಿ 187 ಸ್ಯಾಂಪಲ್ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಕ್ವಾರಂಟೈನ್ನಲ್ಲಿನ 539 ಜನರು ನಿಗಾದಲ್ಲಿದ್ದಾರೆ. ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು 9245 ಸ್ಯಾಂಪಲ್ಗಳ ಪೈಕಿ ಒಟ್ಟು ನೆಗಟಿವ್ ಪ್ರಕರಣ 8913, ಪಾಸಿಟಿವ್ ಪ್ರಕರಣ 99 ಬಂದಿವೆ. ಕೋವಿಡ್-19 ನಿಂದ ಇಲ್ಲಿಯವರೆಗೆ ಗುಣಮುಖರಾದವರು 88 ರೋಗಿಗಳು ಇದ್ದಾರೆ. ಈಗ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು 10 ಜನ ಇದ್ದಾರೆ.