ಬಾಗಲಕೋಟೆ:ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಗರ್ಭಿಣಿ ಹಾಗೂ ಒಬ್ಬ ಸೋಂಕಿತನಿಂದ ಮತ್ತೆ 5 ಮಂದಿಗೆ ಸೋಂಕು ಹರಡಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 76ಕ್ಕೆ ಏರಿದೆ.
ಬಾಗಲಕೋಟೆಯಲ್ಲಿ ಮತ್ತೆ 5 ಮಂದಿಗೆ ಕೊರೊನಾ ದೃಢ: 76ಕ್ಕೆ ಏರಿದ ಸೋಂಕಿತರ ಸಂಖ್ಯೆ - Bagalkot Corona Update
ಗರ್ಭಿಣಿ ಹಾಗೂ ಒಬ್ಬ ಸೋಂಕಿತನಿಂದ ಮತ್ತೆ 5 ಮಂದಿಗೆ ಸೋಂಕು ಹರಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 76ಕ್ಕೆ ಏರಿದೆ. ಈ ಹಿಂದೆ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ನಾಲ್ಕು ಜನರಿಗೆ 14 ದಿನಗಳ ಕ್ವಾರಂಟೈನ್ ಬಳಿಕ ಮಾಡಿದ ಮರು ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ.
ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 4 ಜನ, ಬಾಗಲಕೋಟೆಯ ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಪಿ-1391 ಬಾಗಲಕೋಟೆಯ 38 ವರ್ಷದ ವ್ಯಕ್ತಿಗೆ ಮಹಾರಾಷ್ಟ್ರದ ಕೊಲ್ಲಾಪುರ ಪ್ರವಾಸದ ಹಿನ್ನೆಲೆ ಸೋಂಕು ತಗುಲಿದೆ. ಈ ವ್ಯಕ್ತಿ ಜಿಲ್ಲೆಗೆ ಆಗಮಿಸಿದಾಗ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಢಾಣಕಶಿರೂರಿನ ಪಿ-1392, 11 ವರ್ಷದ ಬಾಲಕಿ, ಪಿ-1393, 40 ವರ್ಷದ ಪುರುಷ, ಪಿ-1394, 23 ವರ್ಷದ ಯುವಕ, ಪಿ-1395, 43 ವರ್ಷದ ವ್ಯಕ್ತಿಗೆ 23 ವರ್ಷದ ಪಿ-607 ಗರ್ಭಿಣಿ ಮಹಿಳೆಯ ಸಂಪರ್ಕದಿಂದ ಸೋಂಕು ಹರಡಿದೆ ಎನ್ನಲಾಗಿದೆ.
ಈ ಹಿಂದೆ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ನಾಲ್ಕು ಜನರಿಗೆ 14 ದಿನಗಳ ಕ್ವಾರಂಟೈನ್ ಬಳಿಕ ಮಾಡಿದ ಮರು ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ.