ಕರ್ನಾಟಕ

karnataka

ETV Bharat / state

ತೋಟದ ಮನೆಯಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ: ಲಕ್ಷಾಂತರ ರೂ.ನಷ್ಟ - ಜಮಖಂಡಿ ತಾಲೂಕಿನ ಕೊಣ್ಣೂರ

ಬಾಗಲಕೋಟೆ ಜಿಲ್ಲೆಯಲ್ಲಿ ತೋಟದ ಮನೆಯಲ್ಲಿ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿ 10 ಟಗರು, 1 ಆಕಳು ಮತ್ತು 1 ಎತ್ತು ಸೇರಿದಂತೆ ಧವಸ ಧಾನ್ಯಗಳೆಲ್ಲಾ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

fire-from-short-circuit-in-the-farmhouse
ತೋಟದ ಮನೆಯಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ

By

Published : Jun 17, 2021, 9:39 PM IST

ಬಾಗಲಕೋಟೆ: ತೋಟದ ಮನೆಯಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ಜಾನುವಾರುಗಳು ಸಹಿತ ಧವಸಧಾನ್ಯ ಬೆಂಕಿಗಾಹುತಿಯಾಗಿರಯವ ಘಟನೆ ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 10 ಟಗರು, 1 ಆಕಳು ಮತ್ತು 1 ಎತ್ತು ಸೇರಿದಂತೆ ಧವಸ ಧಾನ್ಯಗಳೆಲ್ಲಾ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಗ್ರಾಮದ ಮಾಳಪ್ಪ ಲಕ್ಕೊಡ್ರ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ರೈತರಿಗೆ ಸಾಂತ್ವನ ಹೇಳಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಗಳ ಜೊತೆಗೆ ಮಾತನಾಡಿ ಸರ್ಕಾರದಿಂದ ಸಿಗಬೇಕಾಗಿರುವ ಪರಿಹಾರ ಧನ ಬರುವಂತೆ ಮಾಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಮಳೆ ಗಾಳಿಯಿಂದ ರೈತರು ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದರು.

ಓದಿ:ಕೊವಿಡ್ ಲಸಿಕೆ ಪಡೆದ ಬಳಿಕ ಹೃದಯಾಘಾತ: ಅಂಕೋಲಾದಲ್ಲಿ ವೃದ್ಧ ಸಾವು

ABOUT THE AUTHOR

...view details