ಬಾಗಲಕೋಟೆ:ಸಂಕ್ರಾತಿಯಂದು ರೈತಾಪಿ ವರ್ಗದವರು ತಮ್ಮ ಹೊಲದಲ್ಲಿ ಚರಗ ಚಲ್ಲುವ ಸಂಪ್ರದಾಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದು, ಈ ಮೂಲಕ ಭೂಮಿ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಮಕರ ಸಂಕ್ರಾಂತಿಯ ಮತ್ತು ಎಳ್ಳು ಅಮಾವಾಸ್ಯೆ ನಿಮಿತ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಮುತ್ತಪ್ಪ ಕಾಳನ್ನವರ ಜಮೀನಿನಲ್ಲಿ ಉತ್ತರ ಕರ್ನಾಟಕ ಜಾನಪದ ಸೊಗಡು ಬಿಂಬಿಸುವ ಗೀತೆಗಳನ್ನು ಹಾಡುವ ಮೂಲಕ ಸಂಕ್ರಾಂತಿ ಆಚರಣೆ ಮಾಡಲಾಯಿತು. ಜೋಳದ ತೆನೆ, ಕೆಂಪು ಮನಸಿಕಾಯಿ ಹಾಗೂ ಕಡಲೆ ಬಿತ್ತಿರುವ ಹೊಲದ ಮಧ್ಯೆ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಜಾನಪದ ಗೀತೆ ಹಾಡಲಾಯಿತು.
ಜಾನಪದ ಹಾಡುಗಾರ ಗವಿಸಿದ್ದಯ್ಯ ಹಳ್ಳಿಕೇರಿ ಮಠ ಗವಿಸಿದ್ದಯ್ಯ ಹಳ್ಳಿಕೇರಿ ಮಠ ತಮ್ಮ ಕಂಚಿನ ಕಂಠದಿಂದ ಗ್ರಾಮ ಸೊಗಡಿನ ಹಾಡಗಳ ರಸದೌತಣ ನೀಡಿದರು. ಎಳ್ಳು ಅಮವಾಸ್ಯೆ ನಿಮಿತ್ತ ರೈತರು ತಮ್ಮ ಹೊಲಕ್ಕೆ ತೆರಳಿ ವಿವಿಧ ಬಗೆಯ ಆಹಾರ ತಿನಿಸುಗಳ ಇಟ್ಟು, ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಇಡೀ ಜಮೀನು ತುಂಬಾ ಆಹಾರವನ್ನು ಚೆಲ್ಲಿ, ಮಳೆ-ಬೆಳೆ ಚೆನ್ನಾಗಿ ಆಗಲಿ ಎಂದು ಬೇಡಿಕೊಳ್ಳುತ್ತಾರೆ.
ಸಂಕ್ರಾಂತಿ ಕುರಿತು ಹಂಪಿ ವಿವಿ ಪ್ರಾಧ್ಯಾಪಕರಾದ ಡಾ.ವೀರೇಶ ಬಡಿಗೇರ ಆದರೆ ಇಲ್ಲಿ ಮಾತ್ರ ಜಾನಪದ ಹಾಡು ಹಾಡಿ ಬೆಳೆ ಚೆನ್ನಾಗಿ ಆಗುವಂತೆ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಂಪಿ ವಿವಿ ಪ್ರಾಧ್ಯಾಪಕರಾದ ಡಾ.ವೀರೇಶ ಬಡಿಗೇರ ಮಾತನಾಡಿ, ಉತ್ತರ ಕರ್ನಾಟಕ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜಾನಪದ ಕಲೆ ಜೀವಂತಾಗಿದೆ. ಎಷ್ಟೇ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಹೂಂದಿದರೂ ಜಾನಪದ ಕಲೆಯು ತನ್ನದೇ ಆದ ಮಹತ್ವ ಪಡೆದುಕೂಂಡಿದೆ. ಸಂಕ್ರಾಂತಿ ಅಂಗವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ:ಮಕರ ಸಂಕ್ರಾಂತಿ: ಹಂಪಿ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತಗಣ