ಬಾಗಲಕೋಟೆ:ಸಾಲಬಾಧೆ ತಾಳಲಾರದೆ ಶನಿವಾರ ಬೆಳಗಿನ ಜಾವ ಮನೆಯಲ್ಲೇ ಯುವ ರೈತನೊಬ್ಬ ನೇಣಿಗೆ ಶರಣಾದ ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಸಮೀಪದ ಜಂಗವಾಡದಲ್ಲಿ ನಡೆದಿದೆ.
ಬಾಗಲಕೋಟೆ: ಸಾಲಬಾಧೆ ತಾಳದೆ ನೇಣಿಗೆ ಶರಣಾದ ಯುವ ರೈತ
ಸಾಲಬಾಧೆ ತಾಳಲಾರದೆ ಶನಿವಾರ ಬೆಳಗಿನ ಜಾವ ಮನೆಯಲ್ಲೇ ಯುವ ರೈತನೊಬ್ಬ ನೇಣಿಗೆ ಶರಣಾದ ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಸಮೀಪದ ಜಂಗವಾಡದಲ್ಲಿ ನಡೆದಿದೆ.
ಶಿವಾನಂದ ಸೋಮಲಿಂಗಪ್ಪ ಜಂಬಗಿ (38) ಮೃತ ರೈತ. ಈತ ತನ್ನ 5 ಎಕರೆ ಜಮೀನಿನಲ್ಲಿ ಇತ್ತೀಚೆಗಷ್ಟೇ ಕೊಳವೆ ಬಾವಿ ಕೊರೆಸಿದ್ದ. ಕಡಿಮೆ ಪ್ರಮಾಣದ ನೀರು ಬಂದು ಕೃಷಿಗೆ ಸಹಕಾರಿ ಆಗಲಿಲ್ಲ. ಅಲ್ಲದೆ ಸಾಲ ಮಾಡಿ ಕೋಳಿ ಫಾರಂ ಹಾಕಿದ್ದ. ಇನ್ನೇನು ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ಲಾಕಡೌನ್‍ನಿಂದ ಅದು ಕೂಡ ನೆಲಕಚ್ಚಿತ್ತು. ಗ್ರಾಮ ಶಕ್ತಿ ಸಂಘದಲ್ಲಿ 5 ಲಕ್ಷ ರೂ., ಕೃಷಿ ಸಹಕಾರಿ ಬ್ಯಾಂಕ್ನಲ್ಲಿ 50 ಸಾವಿರ ರೂ. ಹಾಗೂ ಇತರೆ ಖಾಸಗಿ ಕಡೆಗಳಲ್ಲಿ 2 ಲಕ್ಷ ರೂ. ಸೇರಿದಂತೆ ಸುಮಾರು 7.50 ಲಕ್ಷ ರೂ. ಸಾಲ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಿನ ಕಳೆದಂತೆ ಸಾಲಬಾಧೆ ಹೆಚ್ಚಾಗಿ ತೀವ್ರ ಮನನೊಂದ ಶಿವಾನಂದ, ಶನಿವಾರ ಬೆಳಗಿನ ಜಾವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಕೆರೂರ ಉಪ ತಹಶೀಲ್ದಾರ ಎಂ.ಬಿ.ಮಲಕನ್ನವರ, ಮಹಿಳಾ ಪಿಎಸ್‍ಐ ನೀಲಮ್ಮ ಘಂಟಿ, ಕೃಷಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.