ಬಾಗಲಕೋಟೆ:ಪ್ರಸಕ್ತ ವರ್ಷ ಕಬ್ಬಿನ ಬೆಳೆಗೆ ಸಕ್ಕರೆ ಕಾರ್ಖಾನೆಗಳಿಂದ 3500 ರೂ. ದರ ನೀಡಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.
ಮುಧೋಳ ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರ ಸಂಘದಿಂದ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು. 2013ರಿಂದ 2020ರವರೆಗೆ ಕಬ್ಬಿನ ದರದಲ್ಲಿ ಪರಿಷ್ಕರಣೆಯಾಗಿಲ್ಲ. ಉತ್ತರ ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಸಭೆ ಮಾಡಿ ಆದೇಶ ಹೊರಡಿಸಬೇಕು. ರೈತರಿಗೆ ದೊರೆಯಬೇಕಾಗಿದ್ದ ಎಸ್‍ಎಪಿ ಹಿಂದಿನ ಕಾಯ್ದೆಗಳೆಲ್ಲವೂ ಅಸ್ಥಿ ಪಂಜರದಂತಾಗಿವೆ. ನಿಜವಾಗಿ ರೈತರ ಬಗ್ಗೆ ಕಾಳಜಿ ಇದ್ದರೆ ಮೊದಲು ಕಬ್ಬಿನ ದರದಲ್ಲಿ ಅಮೂಲಾಗ್ರ ಬದಲಾವಣೆ ಘೋಷಣೆಯಾಗಬೇಕು ಎಂದರು.
ಕಾರ್ಖಾನೆಯನ್ನು ಆರಂಭಿಸುವ ಮುಂಚೆ ಕಬ್ಬಿನ ಬಾಕಿ ಪಾವತಿಯಾಗಬೇಕು. ಮಹಾರಾಷ್ಟ್ರ ಮಾದರಿಯಂತಹ ಎಕ್ಸೆಪೈಡ್ ನಿಗದಿಯಾಗಬೇಕು. ಪ್ರಸಕ್ತ ವರ್ಷದಲ್ಲಿ ದರ ನಿಗದಿಯಾಗುವರಿಗೂ ಕಬ್ಬು ಕಟಾವು ಮಾಡಬಾರದು. ನಿಮ್ಮ ರಾಜಕೀಯ ಏನೇ ಇರಲಿ ಮೊದಲು ರೈತ ಕುಲವನ್ನು ಸಂರಕ್ಷಣೆ ಮಾಡಿ. ಕೋವಿಡ್, ಪ್ರವಾಹ ನಂತರ ರೈತ ಸಂಕಷ್ಟ ಅನುಭವಿಸಿದ್ದಾನೆ ಎಂದರು.