ಕರ್ನಾಟಕ

karnataka

ETV Bharat / state

ಸಾಲಬಾಧೆ ತಾಳಲಾರದೆ ಬಾಗಲಕೋಟೆಯಲ್ಲಿ ಯುವ ರೈತ ಆತ್ಮಹತ್ಯೆಗೆ ಶರಣು - Bagalkote crime latest news

ಬೀಳಗಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Farmer suicide
Farmer suicide

By

Published : Oct 3, 2020, 3:15 PM IST

ಬಾಗಲಕೋಟೆ :ಸಾಲಬಾಧೆ ತಾಳಲಾರದೆ ನದಿಗೆ ಜಿಗಿದು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀಳಗಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ್ ತಳವಾರ(33) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದನು. ಆದರೆ ಮಳೆಯಿಂದ ಬೆಳೆ ಹಾಳಾಗಿತ್ತು.

ಅಷ್ಟೇ ಅಲ್ಲದೆ ಈತ ವಿವಿಧ ಬ್ಯಾಂಕ್ ಗಳಲ್ಲಿ ಅಂದಾಜು 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು. ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ತಾಲೂಕಿನ ಹಿರೇಸಂಶಿ ಬಳಿಯ ಘಟಪ್ರಭಾ ನದಿಯಲ್ಲಿ ರೈತನ ಶವ ಪತ್ತೆಯಾಗಿದೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details