ಕರ್ನಾಟಕ

karnataka

ETV Bharat / state

ಪ್ರವಾಹದಿಂದ ರಕ್ಷಿಸಿದ ಜೀವಂತ ದೇವರುಗಳಿಗೆ ಬೀಳ್ಕೊಡುಗೆ : ರೋಚಕ ಸಂದರ್ಭ ಬಿಚ್ಚಿಟ್ಟ ಕರ್ನಲ್

ಆರು ದಿನಗಳ ಕಾಲ ಕಾರ್ಯಾಚರಣೆ ನಂತರ ಮಂಗಳವಾರ ಬಾಗಲಕೋಟೆ ಜಿಲ್ಲಾಡಳಿತ ಸೇನಾತಂಡದ ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಗೌರವಿಸಿ ಬೀಳ್ಕೊಡಲಾಯಿತು ಇದೆ ಸಂದರ್ಭದಲ್ಲಿ ಕರ್ನಲ್ ಸಚಿನ್ ಜೈನ್ ಕಾರ್ಯಾಚರಣೆಯ ರೋಚಕ ಘಟನೆಗಳನ್ನು ಮೆಲಕು ಹಾಕಿದರು.

ಸೈನಿಕರಿಗೆ ಬಿಳ್ಕೊಡುಗೆ

By

Published : Aug 13, 2019, 5:54 PM IST

Updated : Aug 13, 2019, 6:59 PM IST

ಬಾಗಲಕೋಟೆ: ಜಿಲ್ಲೆಯ ಪ್ರವಾಹ ದಿಂದ ಸಿಲುಕಿದ ಜನರನ್ನು ರಕ್ಷಣೆ ಮಾಡಿದ ಸೇನಾ ಸಿಬ್ಬಂದಿಗೆ ಜಿಲ್ಲಾಡಳಿತವು ಆತ್ಮೀಯವಾಗಿ ಬಿಳ್ಕೊಡೆಗೆ ಮಾಡಲಾಯಿತು.

ಜಿಲ್ಲೆಯಲ್ಲಿ ಆರು ದಿನಗಳ ಕಾಲ ಕಾರ್ಯಾಚರಣೆ ನಂತರ ಮಂಗಳವಾರ ಜಿಲ್ಲಾಡಳಿತ ಸೇನಾತಂಡದ ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಗೌರವಿಸಿ ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದ ಮಹಿಳಾ ಅಧಿಕಾರಿ ಹಾಗೂ ಸೇನಾ ಸಿಬ್ಬಂದಿಗೆ ಹಣೆಗೆ ಕುಂಕುಮವಿಟ್ಟು ರಾಖಿ ಕಟ್ಟಿ ಸಂಭ್ರಮಿಸಿದರು.

ಪ್ರವಾಹದಿಂದ ತತ್ತರಿಸಿದ್ದ ಜಮಖಂಡಿ, ಮುಧೋಳ ಹಾಗೂ ಬಾದಾಮಿ ಸುತ್ತಲಿನ ಕಾರ್ಯಾಚರಣೆಯಲ್ಲಿ ಒಟ್ಟು 1600 ಸಂತ್ರಸ್ಥರನ್ನು ಜಿಲ್ಲೆಯಲ್ಲಿ ರಕ್ಷಿಸಲಾಗಿದೆ ಎಂದು ಕರ್ನಲ್ ಸಚಿನ್ ಜೈನ್ ತಿಳಿಸಿದರು. ಜಿಲ್ಲಾಡಳಿತದ ಸಭಾಂಗಣದಲ್ಲಿಂದು 6 ದಿನಗಳ ಕಾರ್ಯಾಚರಣೆಯನ್ನು ನೆನಪಿಸುತ್ತಾ ಭಾವುಕರಾಗಿ ನುಡಿದರು. ಸಂತ್ರಸ್ಥರ ರಕ್ಷಣಾ ಕಾರ್ಯದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಸೇನಾಧಿಕಾರಿ ಸಚಿನ್, ಪ್ರವಾಹ ಸಂದರ್ಭದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ನೆರೆಯಲ್ಲಿ ಬಾಧಿತರಾಗಿ ಸಂಕಷ್ಟದಲ್ಲಿದ್ದ ಮುತ್ತೂರು, ಹಿರೇಪಡಸಲಗಿ, ಘಟಪ್ರವಾದ ರೂಗಿಯಲ್ಲಿ 15 ಜನ ಗ್ರಾಮಸ್ಥರ ರೋಚಕ ಜೀವರಕ್ಷಣೆ, ಮಿರ್ಜಿ, ನಂದಗಾಂವ, ಢವಳೇಶ್ವರದ ಮಳಲಿ ಸೇರಿದಂತೆ ಮಲಪ್ರಭಾದ ಪಟ್ಟದಕಲ್ಲಿನಲ್ಲಿ 118 ಗ್ರಾಮಸ್ಥರ ರೋಚಕ ಕಾರ್ಯಾಚರಣೆಯನ್ನು ವಿವರವಾಗಿ ಬಿಚ್ಚಿಟ್ಟರು.

ಜಿಲ್ಲಾಡಳಿತದಿಂದ ಸೈನಿಕರಿ ಬಿಳ್ಕೊಡುಗೆ

ದೇಶದ ವಿವಿದೆಡೆ ನಡೆದ ಸುನಾಮಿ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿದ ಅನುಭವ ಹೊಂದಿರುವ ಉತ್ತರ ಪ್ರದೇಶ ಮೂಲಕ ಸೇನಾಧಿಕಾರಿ ಸಚಿನ್ ಜೈನ್ ತಮ್ಮ 19 ವರ್ಷಗಳ ಸುದೀರ್ಘ ಅನುಭವವನ್ನು ಸಂತಸದಿಂದ ಹಂಚಿಕೊಂಡರು. ಕಳೆದ 6 ದಿನಗಳಿಂದ ಜಿಲ್ಲಾಡಳಿತದ ಸಮನ್ವಯತೆಯಿಂದ ಆರಂಭಗೊಂಡ ನಮ್ಮ ಕಾರ್ಯಾಚರಣೆಯಲ್ಲಿ ಸ್ಥಳೀಯವಾಗಿಯೂ ಸಹ ಉತ್ತಮ ಬೆಂಬಲ, ಸಹಕಾರ ದೊರೆತಿದ್ದರಿಂದ ಯಾವುದೇ ರೀತಿಯಲ್ಲಿ ಅಡಚಣೆಗಳು ಉಂಟಾಗಲಿಲ್ಲವೆಂದರು.

ರೂಗಿಯಲ್ಲಿ 15 ಜನ ಸಂತ್ರಸ್ಥರ ಜೊತೆ 5 ಜನ ಸ್ವಂತ ರಕ್ಷಣಾ ಸಿಬ್ಬಂದಿಗಳು ಸಹ ಘಟಪ್ರಭಾದ ಪ್ರವಾಹದ ಅಬ್ಬರಕ್ಕೆ ಸಿಲುಕಿಕೊಂಡು ತಮ್ಮ ರಕ್ಷಣೆಗಾಗಿ ಮನೆಯೇರಿ ಕುಳಿತಿದ್ದನ್ನು ನೆನಪಿಸಿಕೊಂಡ ಕರ್ನಲ್ ಸಚಿನ್ ಅವರು ಇಡೀ ಆರು ದಿನಗಳ ಕಾರ್ಯಾಚರಣೆಯಲ್ಲಿ ತೀರ ರೋಚಕ ಸನ್ನಿವೇಶ ನೆನಪಾಗಿ ಉಳಿಯಲಿದೆ ಎಂದರು. ಮುತ್ತೂರ ಸ್ಥಳಾಂತರ ಸಂದರ್ಭದಲ್ಲಿ ಮಹಿಳೆಯೊರ್ವಳು ಚಿಕ್ಕಮಗುವನ್ನು ತನ್ನ ಪತಿಯ ಕೈಗೆ ಹಸ್ತಾಂತರಿಸಲು ಆತಂಕಗೊಂಡು ಕೊನೆಗೆ ಸೇನಾ ಸಿಬ್ಬಂದಿ ಕೈಗೆ ನೀಡಿರುವುದು ಸೇನೆ ಸಿಬ್ಬಂದಿ ಮೇಲಿನ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಿಸಿತುಎಂದು ತಿಳಿಸಿದರು.

Last Updated : Aug 13, 2019, 6:59 PM IST

ABOUT THE AUTHOR

...view details