ಬಾಗಲಕೋಟೆ:ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಅಭಿಮಾನಿಯೊರ್ವರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಹುನಗುಂದ ಹಾಗೂ ಇಲಕಲ್ಲ ಗ್ರಾಮೀಣ ಮಂಡಲ ಯುವಮೋರ್ಚಾ ಅಧ್ಯಕ್ಷ ಅನೀಲ ಬಂಡರಗಲ್ಲ ಸುಮಾರು 2 ಕಿ.ಮೀಟರ್ ದೂರದವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ನೆಚ್ಚಿನ ನಾಯಕನಿಗೆ ಸಚಿವಸ್ಥಾನ ನೀಡುವಂತೆ ಅಭಿಮಾನಿಗಳಿಂದ ದೀರ್ಘದಂಡ ನಮಸ್ಕಾರ ಕೂಡಲ ಸಂಗಮದಲ್ಲಿ ಸಂಗಮನಾಥನ ಸನ್ನಿಧಿಯಲ್ಲಿ ಅಭಿಮಾನಿ ಈ ಕಾರ್ಯ ಮಾಡಿದ್ದು, ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವಂತೆ ದೇವರ ಬಳಿ ಪ್ರಾರ್ಥಿಸಿದ್ದಾರೆ.
ಇತ್ತ ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರ ಅಭಿಮಾನಿಗಳು ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ರಾಘು ಹಿರೇಗೌಡ ಎಂಬ ಅಭಿಮಾನಿ ದೀರ್ಘದಂಡ ನಮಸ್ಕಾರ ಹಾಕಿ ಸಚಿವ ಸ್ಥಾನಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾಸಕ ಅರವಿಂದ್ ಬೆಲ್ಲದ್ ಅವರ ಜನ್ಮದಿನ ಹಿನ್ನೆಲೆ ಅಭಿಮಾನಿಗಳು ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಬೆಲ್ಲದ್ ಪರ ಘೋಷಣೆ ಕೂಗಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ನೆಚ್ಚಿನ ನಾಯಕನಿಗೆ ಸಚಿವಸ್ಥಾನ ನೀಡುವಂತೆ ಅಭಿಮಾನಿಗಳಿಂದ ದೀರ್ಘದಂಡ ನಮಸ್ಕಾರ ಇದನ್ನೂ ಓದಿ:ಬುಧವಾರ/ಗುರುವಾರ ಸಚಿವ ಸಂಪುಟ ರಚನೆ ಆಗಬಹುದು: ಬಿ.ಸಿ.ಪಾಟೀಲ್