ಕರ್ನಾಟಕ

karnataka

ETV Bharat / state

ಐಟಿ ಅಧಿಕಾರಿಗಳ ಸೋಗಿನಲ್ಲಿ ವಂಚಕರಿಂದ ಪ್ರವಾಹ ಸಂತ್ರಸ್ತನ ಮನೆ ಮೇಲೆ ರೇಡ್​​​​! - fake IT officers rade in flood victim house

ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಪ್ರವಾಹ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ 12,500 ನಗದು ಹಾಗೂ 3 ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ಬಾಗಲಕೋಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

fake
ನಕಲಿ ಐಟಿ ಅಧಿಕಾರಿಗಳ ದಾಳಿ!

By

Published : Jan 4, 2020, 11:21 AM IST

ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಪ್ರವಾಹ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ 12,500 ನಗದು ಹಾಗೂ 3 ಮೊಬೈಲ್ ಫೋನ್​​ಗಳನ್ನ ದೋಚಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ‌ ಡಿಸೆಂಬರ್ 23ರಂದು ಈ ಘಟನೆ ನಡೆದಿದ್ದು, ಐಟಿ ಅಧಿಕಾರಿಗಳು ಎಂದು ಸುಳ್ಳು ಹೇಳಿ ಹಣ ದೋಚಿಕೊಂಡು ಹೋಗಿದ್ದಾರೆ. ಲಕ್ಷ್ಮಣ ಅಲಗೂರು ಎಂಬ ಅಟೋ ಚಾಲಕನಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ. ಡಿಸೆಂಬರ್ 23ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ GA-07 Gc- 8275 ನಂಬರಿನ ಎರ್ಟಿಗಾ ಕಾರಿನಲ್ಲಿ ಬಂದ ಖದೀಮರು ತಾವು ಐಟಿ ಅಧಿಕಾರಿಗಳೆಂದು ವಂಚನೆ ಮಾಡಿದ್ದಾರೆ. ಮನೆಯಲ್ಲಿನ ಹಾಸುಕಲ್ಲು, ಬ್ಯಾಗ್, ಪೆಟ್ಟಿಗೆ ಕಿತ್ತು ಜಾಲಾಡಿ ಹುಡುಕಿದ್ದಾರೆ. ಇನ್ನು ಓರ್ವ ಮಹಿಳೆ ಸೇರಿದಂತೆ ಏಳು ಜನರು ಬಂದಿದ್ದರು ಎನ್ನಲಾಗಿದೆ.

ನಕಲಿ ಐಟಿ ಅಧಿಕಾರಿಗಳ ದಾಳಿ!

ಲಕ್ಷ್ಮಣ ಅಲಗೂರ ಮನೆಗೆ ಪ್ರವಾಹ ಸಮಯದಲ್ಲಿ ಕೋಟಿ ಕೋಟಿ ಹಣದ ಗಂಟು ನೀರಿನಲ್ಲಿ ಹರಿದು ಬಂದಿದೆ ಎಂದು ಸುದ್ದಿ ಹಬ್ಬಿದ ಹಿನ್ನೆಲೆ ಈ ಸುದ್ದಿ ತಿಳಿದು ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಬೆಳಗಾವಿಗೆ ಬಂದು ಭೇಟಿಯಾಗಿ ಎಂದು ಬೆಳಗಾವಿ ತೆರಿಗೆ ಇಲಾಖೆ ವಿಳಾಸ ಕೊಟ್ಟು ಹೋದ ಹಿನ್ನೆಲೆ ಲಕ್ಷ್ಮಣ ಅಲಗೂರ ಬೆಳಗಾವಿಗೆ ಹೋದಾಗ ಮೋಸ ಹೋದ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿ, ತನಿಖೆ ನಡೆಸಲಾಗುತ್ತಿದೆ.

For All Latest Updates

ABOUT THE AUTHOR

...view details