ಬಾಗಲಕೋಟೆ:ಕಳೆದ ಹಲವಾರು ತಲೆಮಾರುಗಳಿಂದ ಗಿಡಮೂಲಿಕೆಗಳ ಚೂರ್ಣ ತಯಾರಿಸಿ ಮಾನವನ ಕೆಲ ರೋಗ ಬಾಧೆಗಳನ್ನು ಹೋಗಲಾಡಿಸುವ ಪಾರಂಪರಿಕ ವೈದ್ಯರು ಬಾಗಲಕೋಟೆಯ ನವನಗರದಲ್ಲಿ ಇಂದು ಗಿಡಮೂಲಿಕೆಗಳನ್ನು ಪ್ರದರ್ಶನಕ್ಕಿಟ್ಟಿದ್ರು.
ಅದೆಂಥದೇ ರೋಗಗಳಿದ್ರೂ ಈ ಗಿಡಮೂಲಿಕೆಗಳು ವಾಸಿ ಮಾಡ್ತವೆ.. ಬಾಗಲಕೋಟೆಯಲ್ಲಿ 3 ದಿನ ಪ್ರದರ್ಶನ! - Exhibition of herbs
ಕಳೆದ ಹಲವಾರು ತಲೆಮಾರುಗಳಿಂದ ಗಿಡಮೂಲಿಕೆಗಳ ಚೂರ್ಣ ತಯಾರಿಸಿ ಮಾನವನ ಕೆಲ ರೋಗ ಬಾಧೆಗಳನ್ನು ಹೋಗಲಾಡಿಸುವ ಪಾರಂಪರಿಕ ವೈದ್ಯರು ಬಾಗಲಕೋಟೆಯ ನವನಗರದಲ್ಲಿ ಇಂದು ಗಿಡಮೂಲಿಕೆಗಳನ್ನು ಪ್ರದರ್ಶನಕ್ಕಿಟ್ಟಿದ್ರು.
ಫುಟ್‍ಪಾತ್ ಮೇಲೆ ಚಿಕ್ಕ ಚಿಕ್ಕ ತೆರೆದ ಡಬ್ಬಿಗಳಲ್ಲಿ ಹಲವಾರು ರೀತಿಯ ಗಿಡಮೂಲಿಕೆಗಳನ್ನು ಪ್ರದರ್ಶನಕ್ಕಿಟ್ಟಿರುವ ಈ ಪಾರಂಪರಿಕ ವೈದ್ಯರು ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು ಮನುಷ್ಯನ ಸಾಧಾರಣ ರೋಗಗಳಿಗೆ ಔಷಧಿ ನೀಡುತ್ತಾರೆ. ಹುಬ್ಬಳ್ಳಿಯವರಾದ ಇವರು ಪ್ರತಿ ನಗರದಲ್ಲಿ 15 ರಿಂದ 20 ದಿನ ವಾಸವಿದ್ದು, ಔಷಧಿ ಮಾರಾಟ ಮಾಡುತ್ತಾರೆ. ಪಾರಂಪರಿಕ ಔಷಧಿಗಳನ್ನು ಮೊದಲು ಅರಣ್ಯದಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ಗಿಡಮೂಲಿಕೆ ಸಂಗ್ರಹಕ್ಕೆ ನಿರ್ಬಂಧ ಹೇರಿರುವುದರಿಂದ ಬೇರೆಡೆ ಖರೀದಿಸಿ ಚೂರ್ಣ ಔಷಧಿ ತಯಾರಿಸಲಾಗುತ್ತಿದೆ.
ಈಗ ಹೈದರಾಬಾದಿನ ಗೋಪಾಲ್‍ದಾಸ್, ಕೃಷ್ಣದಾಸ್,ಮದನಪಾಲ್, ಆಯುರ್ವೇದಿಕ್, ಯುನಾನಿ ಮೆನಿಸ್, ಧಾರವಾಡದ ಸಿದ್ದಲಿಂಗಪ್ಪ, ಹುಬ್ಬಳ್ಳಿಯ ತಿಪ್ಪಣ್ಣ ಅವರಿಂದ ಔಷಧಿಗಳನ್ನು ಹೋಲ್‍ಸೇಲ್ ಆಗಿ ಖರೀದಿಸುತ್ತಿದ್ದಾರೆ. ಅಲ್ಲದೇ ಇವರು ಪಾರಂಪರಿಕ ವೈದ್ಯರೆಂದು ಸರ್ಕಾರದಿಂದ ಪ್ರಮಾಣ ಪತ್ರವನ್ನೂ ಕೂಡ ಪಡೆದಿದ್ದಾರೆ.