ಕರ್ನಾಟಕ

karnataka

ETV Bharat / state

ನಕಲಿ ಮದ್ಯ ತಯಾರಿಕಾ ಅಡ್ಡೆ ಮೇಲೆ ರೇಡ್: ಓರ್ವ ಅಂದರ್​ - ಓರ್ವ ವ್ಯಕ್ತಿ ಅಂದರ್​

ನಕಲಿ ಮದ್ಯ ತಯಾರಿಸಿ ಗಂಗಾವತಿಯಿಂದ ಬಾಗಲಕೋಟೆ, ಹುಬ್ಬಳ್ಳಿಗೆ ಸಾಗಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Excise officers raided on preparing illegal liquor in Bagalkot
ನಕಲಿ ಮದ್ಯ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

By

Published : Feb 5, 2020, 8:21 AM IST

ಬಾಗಲಕೋಟೆ: ನಕಲಿ ಮದ್ಯ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ರಾಸಾಯನಿಕ ಪದಾರ್ಥ, ಸಾಮಗ್ರಿಗಳನ್ನ ವಶಕ್ಕೆ ಪಡೆದು, ಓರ್ವ ವ್ಯಕ್ತಿಯನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಮದ್ಯ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

ಗಂಗಾವತಿ ನಿವಾಸಿ ಪರಶುರಾಮ ಈಳಗೇರ ಬಂಧಿತ ಆರೋಪಿ. ಈತ ನಕಲಿ ಮದ್ಯ ತಯಾರಿಸಿ ಗಂಗಾವತಿಯಿಂದ ಬಾಗಲಕೋಟೆ, ಹುಬ್ಬಳ್ಳಿಗೆ ಸಾಗಿಸುತ್ತಿದ್ದ. ಆರೋಪಿ ಶಿರೂರ ಅಗಶಿ ಬಳಿ ಕಾರಿನಲ್ಲಿ ನಕಲಿ ಮದ್ಯ ಸಾಗಿಸುವಾಗ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಂಧಿತನಿಂದ 245 ಲೀಟರ್ ಮದ್ಯಸಾರ, 4000 ನಕಲಿ ಕ್ಯಾಪ್​ಗಳು, 2 ಲೀಟರ್ ಕೆರಾಮೆಲ್ ಹಾಗೂ ಸಾಗಾಣಿಕೆಗೆ ಬಳಸುತ್ತಿದ್ದ ಟಾಟಾ ಇಂಡಿಕಾ ವಾಹನ ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಶಿವಾನಂದ ಹೂಗಾರ, ರೇಖಾ ಕೊಡಕೇರಿ ಹಾಗೂ ಬಿ.ಎಸ್. ಇಂಡಿ ಹಾಗೂ ಇತರ ಸಿಬ್ಬಂದಿ ಇದ್ದರು.

ABOUT THE AUTHOR

...view details