ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ದಂಧೆ ಹಿಂದೆ ಕಾಂಗ್ರೆಸ್‌ನವರೇ ಇದ್ದರೂ ಬಂಧಿಸಲಿ.. ವಿಪಕ್ಷ ನಾಯಕ ಸಿದ್ದರಾಮಯ್ಯ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಾಕೆ ದೆಹಲಿಗೆ ಹೋಗಿದ್ದಾರೆಂದು ಗೊತ್ತಿಲ್ಲ. ಶೆಟ್ಟರ್ ಮರಳಿ ಬರುತ್ತಾರಲ್ಲವೇ, ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು..

ex-cm-siddaramaiah-reaction-on bitcoin-case
ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

By

Published : Nov 13, 2021, 7:45 PM IST

Updated : Nov 13, 2021, 8:26 PM IST

ಬಾಗಲಕೋಟೆ : ಬಿಟ್ ಕಾಯಿನ್ ದಂಧೆಯ (bitcoin scam) ಹಿಂದೆ ಕಾಂಗ್ರೆಸ್​​ನವರೇ ಇದ್ದರೆ, ಯಾರೆಂದು ಹೇಳಲಿ, ಅಂತವರನ್ನು ಬಂಧಿಸಲಿ. ಬಿಜೆಪಿಯವರು ಇದ್ದಾರಾ? (bjp) ಕಾಂಗ್ರೆಸ್​​ನವರಿದ್ದಾರಾ? (congress) ಅಥವಾ ಜೆಡಿಎಸ್ (JDS) ಪಕ್ಷದವರಿದ್ದಾರಾ? ಎಂಬುದನ್ನು ತಿಳಿಸಬೇಕಲ್ಲವೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (opposition leader siddaramaiah) ಸವಾಲು ಹಾಕಿದರು.

ಬಾದಾಮಿಯಲ್ಲಿ (siddaramaiah in badami) ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದಲ್ಲಿ ಇಬ್ಬರು ಪ್ರಭಾವಿ ನಾಯಕರಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ತನಿಖೆ ಮಾಡುವ ಅಧಿಕಾರ ಸಿಎಂಗೆ ಇದೆ. ಹೆಸರು ಬಹಿರಂಗಪಡಿಸುವಂತೆ ನಾನು ಆಗ್ರಹಿಸಿದ್ದೆ.

ಬಿಟ್ ಕಾಯಿನ್ ದಂಧೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿರುವುದು..

ಬಂಧಿತ ಆರೋಪಿ ಶ್ರೀಕಿಯಿಂದ ಪೊಲೀಸರು ಬಿಟ್ ಕಾಯಿನ್ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ವಶಕ್ಕೆ ಪಡೆದ ಬಿಟ್ ಕಾಯಿನ್ (bitcoin case) ಯಾರ ಹತ್ತಿರ ಹೋಗಿದೆ, ಯಾರಿಗೆ ಟ್ರಾನ್ಸಫರ್ ಆಗಿದೆ. ಪೊಲೀಸರಿಗೆ ಹೋಗಿದೆಯಾ? ರಾಜಕಾರಣಿಗಳಿಗೆ ಹೋಗಿದೆಯಾ? ಎಂಬ ಬಗ್ಗೆ ಬಹಿರಂಗಪಡಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ :ಈ ಪ್ರಕರಣದಿಂದ ಸಿಎಂ ಬೊಮ್ಮಾಯಿ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆಂಬ ಕಾಂಗ್ರೆಸ್​​ನ ಪ್ರಿಯಾಂಕ್ ಖರ್ಗೆ (priyank kharge statement) ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದು, ಖರ್ಗೆಯವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರೊಂದಿಗೆ ನಾನು ಮಾತನಾಡಿಲ್ಲ, ಖರ್ಗೆ ಬಳಿ ಏನು ದಾಖಲಾತಿ ಇದೆ ಎಂಬುದನ್ನು ಕೇಳುತ್ತೇನೆ ಎಂದರು.

ಇದನ್ನೂ ಓದಿ:ವಿಚಾರಣೆ ವೇಳೆ ಖಾಕಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಶ್ರೀಕಿ.. Bitcoin Account​​ ಕಂಡ ಪೊಲೀಸರಿಗೆ ಶಾಕ್

ಪ್ರಕರಣದ ಹಿಂದಿರುವ ಇಬ್ಬರು ಬಿಜೆಪಿ ನಾಯಕರು ಹೆಸರು ಹೇಳುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಏನೂ ಹೇಳಲ್ಲ ಎಂದು ತಲೆ ಅಲ್ಲಾಡಿಸಿದ ಸಿದ್ದರಾಮಯ್ಯ, ವಿಚಾರಣೆ ಮಾಡುತ್ತಿರುವವರೇ ಈ ಬಗ್ಗೆ ತಿಳಿಸಲಿ. ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡ್ತಾರಾ? ಎಂಬ ಅನುಮಾನ ವ್ಯಕ್ತಪಡಿಸಿದರು.

ಶೆಟ್ಟರ್​ ಅವರನ್ನೇ ಕೇಳಿ :ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿ ( jagadish shetter delhi visit) ಭೇಟಿ ವಿಚಾರಕ್ಕೆ, ಯಾಕೆ ದೆಹಲಿಗೆ ಹೋಗಿದ್ದಾರೆಂದು ಗೊತ್ತಿಲ್ಲ. ಜಗದೀಶ್ ಶೆಟ್ಟರ್ ಮರಳಿ ಬರುತ್ತಾರಲ್ಲವೇ, ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.

ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯೆ :ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್​ ಸಿಂಗ್​ ಸುರ್ಜೇವಾಲಾ (Randeep Surjewala) ಅವರು ಹೇಳಿದ್ದನ್ನೇ ನಾನೂ ಹೇಳಿದ್ದೇನೆ. ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರಿರುವ ಬಗ್ಗೆ ಅವರೇ ಹೇಳಬೇಕು. ಯಾರು ಇದ್ದಾರೆ ಎಂಬುದರ ಬಗ್ಗೆ ಮುಖ್ಯಮಂತ್ರಿಯವರು ಅಧಿಕೃತವಾಗಿ ಹೇಳಬೇಕು. ನಾನು ಸರ್ಕಾರ ನಡೆಸುತ್ತಿದ್ದೇನಾ.? ನನಗಿರುವ ಮಾಹಿತಿಯನ್ನು ಹೇಳಿದ್ಧೇನೆ, ಪ್ರಕರಣದಲ್ಲಿ ಯಾರಿದ್ದಾರೆಂದು ಗೊತ್ತಿಲ್ಲ ಎಂದು ನುಣುಚಿಕೊಂಡರು.

ಆಡಿಯೋ ರಿಲೀಸ್ :ಪೊಲೀಸ್ ಇಲಾಖೆ ಅಧಿಕಾರಿಯೊಬ್ಬರ ಆಡಿಯೋ ರಿಲೀಸ್ (audio viral) ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದಕ್ಕಿಂತ ಬೇರೆ ಸಾಕ್ಷಿ ಬೇಕಿದೆಯಾ? ಪ್ರಕರಣವನ್ನು ಮುಚ್ಚಿ ಹಾಕುವ ಅನುಮಾನ ಕಂಡು ಬರುತ್ತಿದೆ‌ ಎಂದ ಅವರು, ಬಾಗಲಕೋಟೆ ವಿಜಯಪುರ ಪರಿಷತ್ ಅಭ್ಯರ್ಥಿಗಳ (council election) ಆಯ್ಕೆ ಬಗ್ಗೆ ನಾಳೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ದೆಹಲಿಯಲ್ಲಿ ಒಂದು ವಾರ ಶಾಲೆ ಬಂದ್​ ​, ಸರ್ಕಾರಿ ಸಿಬ್ಬಂದಿಗೆ ವರ್ಕ್‌ ಫ್ರಮ್‌ ಹೋಮ್‌

Last Updated : Nov 13, 2021, 8:26 PM IST

ABOUT THE AUTHOR

...view details