ಬಾಗಲಕೋಟೆ :ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರವಾಗಿದೆ. ಪಿಎಸ್ಐ ಪರೀಕ್ಷೆಯಲ್ಲಿನ ಅಕ್ರಮವು ದೊಡ್ಡ ಹಗರಣ. ಈ ಸರ್ಕಾರದಲ್ಲಿ ಇದೊಂದೆ ಹಗರಣ ಅಲ್ಲ. ಪ್ರೊಫೆಸರ್ ನೇಮಕಾತಿಯಲ್ಲೂ ಅಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಜಿಲ್ಲೆಯ ಇಲಕಲ್ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಗಾಯತ್ರಿ ಪತ್ತಿನ ಸಂಘ ನಿಯಮಿತ ಬೆಳ್ಳಿ ಮಹೋತ್ಸವ ಹಾಗೂ ಕೇಂದ್ರ ಕಚೇರಿ ನೂತನ ಕಟ್ಟಡದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಭ್ರಷ್ಟಾಚಾರ ಮತ್ತು ಹಗರಣಗಳು ಹಿಂದೆ ಯಾವಾಗಲೂ ನಡೆದಿಲ್ಲ. ಎಲ್ಲ ಇಲಾಖೆಗಳಲ್ಲೂ ಹಗರಣಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.