ಕರ್ನಾಟಕ

karnataka

ETV Bharat / state

ರೈತ ಮಸೂದೆಗಳ ಹೆಸರಲ್ಲಿ ಕಾಂಗ್ರೆಸ್​​ ರಾಜಕೀಯ ಮಾಡುತ್ತಿದೆ : ಈರಣ್ಣ ಕಡಾಡಿ - eeranna kadadi

ಕಾಂಗ್ರೆಸ್ ಪಕ್ಷದವರಿಗೆ ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯ ಇರಲಿಲ್ಲ, ಹೀಗಾಗಿ ಕೆಲ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಈರಣ್ಣ ಕಡಾಡಿ ಕಾಂಗ್ರೆಸ್​ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

eeranna was outraged against the Congress
ರೈತ ಮಸೂದೆಗಳ ಹೆಸರಲ್ಲಿ ಕಾಂಗ್ರೆಸ್​​ ರಾಜಕೀಯ ಮಾಡುತ್ತಿದೆ : ಈರಣ್ಣ ಕಡಾಡಿ

By

Published : Oct 7, 2020, 3:42 PM IST

ಬಾಗಲಕೋಟೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ಬಗ್ಗೆ ಕಾಂಗ್ರೆಸ್ ಪಕ್ಷದವರು ರೈತರಿಗೆ ತಪ್ಪು ತಿಳುವಳಿಕೆ ನೀಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಆರೋಪಿಸಿದ್ದಾರೆ.

ಬಾಗಲಕೋಟೆ ನಗರದಲ್ಲಿ ಬಿಜೆಪಿ ಪಕ್ಷ ಕಿಸಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರೈತರ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಸೂದೆಗಳು ರೈತರಿಗೆ ಅನುಕೂಲಕರವಾಗಿವೆ. ಈ ಹಿನ್ನೆಲೆಯಲ್ಲಿ ರೈತರಿಗೆ ಮನವರಿಕೆ ಮಾಡಲು ಗ್ರಾಮಸಭೆಗಳನ್ನ ನಡೆಸಲಾಗುತ್ತಿದೆ. ಜೊತೆಗೆ ರೈತರಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಮಸೂದೆಗಳ ಹೆಸರಲ್ಲಿ ಕಾಂಗ್ರೆಸ್​​ ರಾಜಕೀಯ ಮಾಡುತ್ತಿದೆ : ಈರಣ್ಣ ಕಡಾಡಿ

ಕಾಂಗ್ರೆಸ್ ಪಕ್ಷದವರಿಗೆ ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯ ಇರಲಿಲ್ಲ, ಹೀಗಾಗಿ ಕೆಲ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜಕೀಯ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಈ ಮಸೂದೆಗಳ ತಿದ್ದುಪಡಿ ಮಾಡುವ ಬಗ್ಗೆ ಘೋಷಿಸಿತು. ಈಘ ಬಗ್ಗೆ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದೆ. ಈ ವಿಷಯವನ್ನು ರೈತರಿಗೆ ಮನವರಿಕೆ ಮಾಡಲಾಗುವುದು ಎಂದರು.

ಡಿ.ಕೆ. ಶಿವಕುಮಾರ ಅವರ ಮನೆಗೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಬಿಐ ಮೊದಲೇ ತಯಾರಿ ನಡೆಸಿರುತ್ತದೆ. ಏಕಾಏಕಿ ದಾಳಿ ನಡೆಸುವುದಿಲ್ಲ. ಈ ಹಿಂದೆನೂ ಡಿಕೆಶಿ ಮನೆಯ ಮೇಲೆ ದಾಳಿ ಆಗಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಿಂಪಥಿ ಗಿಟ್ಟಿಸಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಾರ ಬಗ್ಗೆ ಸಿಬಿಐ ಹತ್ತಿರ ದಾಖಲೆ ಇರುತ್ತದೆ ಅವರ ಮನೆಯ ಮೇಲೆ ದಾಳಿ ಮಾಡುತ್ತಾರೆ. ಅದು ಸಿಬಿಐಗೆ ಬಿಟ್ಟ ವಿಚಾರ ಎಂದು ಹೇಳಿದರು.

ABOUT THE AUTHOR

...view details