ಕರ್ನಾಟಕ

karnataka

ETV Bharat / state

ಎಣ್ಣೆ ಹೊಡೆದು ಹೈಡ್ರಾಮಾ.. ಸಾರಾಯಿ ನಿಷೇಧಿಸಿ ಅಂತಾ ಪಂಚಾಯತ್ ಕಟ್ಟಡ ಏರಿ ಕುಳಿತ ಭೂಪ! - ಪಂಚಾಯತ್ ಕಟ್ಟಡ ಏರಿ ಪ್ರತಿಭಟನೆ

ನಶೆಯಲ್ಲಿದ್ದ ವ್ಯಕ್ತಿಯಿಂದ ಹೈಡ್ರಾಮಾ. ಎಣ್ಣೆ ಹೊಡೆದು ಸಾರಾಯಿ ಬಂದ್ ಮಾಡುವಂತೆ ಗ್ರಾಮ ಪಂಚಾಯತ್ ಕಟ್ಟಡ ಏರಿ ಪ್ರತಿಭಟನೆ.

ಎಣ್ಣೆ ಹೊಡೆದು ಹೈಡ್ರಾಮಾ
ಎಣ್ಣೆ ಹೊಡೆದು ಹೈಡ್ರಾಮಾ

By

Published : Sep 5, 2022, 4:38 PM IST

ಬಾಗಲಕೋಟೆ: ಮದ್ಯ ಸೇವಿಸಿದ ವ್ಯಕ್ತಿಯೇ ಸಾರಾಯಿ ನಿಷೇಧ ಮಾಡುವಂತೆ ಗ್ರಾಮ ಪಂಚಾಯತ್ ಕಟ್ಟಡ ಏರಿ ಹೈಡ್ರಾಮಾ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಕಾಕನೂರ ಗ್ರಾಮದಲ್ಲಿ ನಡೆದಿದೆ. ಕಾಕಪ್ಪ ಮಾದರ ಎಂಬ ವ್ಯಕ್ತಿ ನಶೆಯಲ್ಲೇ ಸಾರಾಯಿ ನಿಷೇಧ ಮಾಡುವಂತೆ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ನಶೆಯಲ್ಲಿದ್ದ ವ್ಯಕ್ತಿಯಿಂದ ಹೈಡ್ರಾಮಾ: ಗ್ರಾಮ ಪಂಚಾಯತ್ ಕಟ್ಟಡ ಮೇಲೆ ಏರಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ನಿಷೇಧ ಮಾಡಿ. ನಾನು ಮನೆ ಕೇಳಲ್ಲ, ನೀರು ಕೇಳಲ್ಲ ಸಾರಾಯಿ ಬಂದ್ ಮಾಡ್ರಿ. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಂಬಂಧಪಟ್ಟವರು ಗಮನ ಹರಿಸಬೇಕು. ಇಲ್ಲವಾದಲ್ಲಿ ಪಂಚಾಯತ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವಾಜ್ ಹಾಕಿದರು.

ಎಣ್ಣೆ ಹೊಡೆದು ಹೈಡ್ರಾಮಾ

ಗ್ರಾಮದ ಯುವಕರು ಹಾಗೂ ಹಿರಿಯ ಮುಖಂಡರು ಸೇರಿಕೊಂಡು ಸಾರಾಯಿ ಬಂದ್ ಮಾಡಿಸುತ್ತೇವೆ ಎಂದು ಭರವಸೆ ನೀಡಿ ಕಟ್ಟಡದ ಮೇಲಿಂದ ಕೆಳಗಿಳಿಸಲಾಗಿದೆ. ನಶೆಯಲ್ಲೇ ಹೈಡ್ರಾಮಾ ಮಾಡಿರುವ ವಿಡಿಯೋ ವೈರಲ್ ಆಗಿದೆ.

(ಇದನ್ನೂ ಓದಿ: ಮದ್ಯ ವ್ಯಸನಿಗಳಿಂದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹಲ್ಲೆ; ಕುಡುಕನ ಕೂಡಿ ಹಾಕಿದ ಮಕ್ಕಳು! )

ABOUT THE AUTHOR

...view details