ಬಾಗಲಕೋಟೆ: ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ್ ಮಾಡಿ ಎಸೆಯುವ ಬದಲು, ಅದರ ಮರುಬಳಕೆ ಮಾಡುವ ಅಗತ್ಯವಿದೆ. ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಖಾಲಿಯಾದ ನೀರಿನ ಬಾಟಲ್ಗಳ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಪರಿಸರ ಪ್ರೇಮಿ ಅರಣ್ಯ ರಕ್ಷಕ.. ವೇಸ್ಟ್ ಬಾಟಲ್, ಸೀರಿಂಜ್ ಮೂಲಕ ಹನಿ ನೀರಾವರಿ - undefined
ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ್ ಮಾಡಿ ಎಸೆಯುವ ಬದಲು, ಅದರ ಮರು ಬಳಕೆ ಮಾಡುವ ಅಗತ್ಯವಿದೆ. ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಖಾಲಿಯಾದ ನೀರಿನ ಬಾಟಲ್ಗಳ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಪರಿಸರ ಪ್ರೇಮಿ ಅರಣ್ಯ ರಕ್ಷಕ..
ವಿನೋದ್ ಬೊಂಬ್ಲೆಕರ್ ಎಂಬ ಅರಣ್ಯ ರಕ್ಷಕರು ರಸ್ತೆ ಬದಿ ಬೆಳೆಸುವ ಮರಗಳಿಗೆ ಪ್ಲಾಸ್ಟಿಕ್ ಬಾಟಲ್ಗಳ ಮೂಲಕ ಹನಿ ನೀರಾವರಿ ಮಾಡಿದ್ದಾರೆ. 2 ಲೀ. ನೀರಿನ ಬಾಟಲ್ ಹಾಗೂ ಸಲೈನ್ ವೈರ್ ಬಳಿಸಿ ಸಸಿಗಳಿಗೆ ಹನಿ ನೀರಾವರಿ ಮಾಡುತ್ತಿದ್ದಾರೆ.
ಅಮೀನಗಡ ವಲಯದಲ್ಲಿ ಬರುವ ರಾಮಥಾಳ ಹಾಗೂ ಕಳ್ಳಿಗುಡ್ಡ ರಸ್ತೆ ಬದಿಯುದ್ದಕ್ಕೂ ಸುಮಾರು 400 ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗುತ್ತಿದೆ. ಅವುಗಳಿಗೆ 2 ಲೀ. ವಾಟರ್ ಬಾಟಲಿ, ಸೀರಿಂಜ್ ವೈರ್ ಮೂಲಕ ಹನಿ-ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated : Jul 6, 2019, 1:41 PM IST