ಬಾಗಲಕೋಟೆ:ಪ್ರವಾಹದಿಂದಾಗಿ ಜಿಲ್ಲೆಯ ಕೃಷ್ಣ ಹಾಗೂ ಘಟಪ್ರಭಾ ನದಿಗಳ ನೀರು ಮನೆಯ ಬಾಗಿಲಿಗೆ ನೀರು ಬಂದರೂ, ಕುಡಿಯಲು ನೀರು ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ಪ್ರವಾಹ ಬಂದ ಪರಿಣಾಮ ಗ್ರಾಮಗಳಲ್ಲಿ ಇರುವ ಬೋರ್ವೆಲ್ಗಳು ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಬೋರ್‌ವೆಲ್ ಚಾಲನೆ ಮಾಡಲು ಸಾಧ್ಯವಾಗದೆ,ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಮುದ್ದಾಪೂರ ಗ್ರಾಮ ಸೇರಿದಂತೆ ಇತರ ಗ್ರಾಮಗಳಿಗೆ ಜೆಕೆ ಸಿಮೆಂಟ್ ಕಾರ್ಖಾನೆ ವತಿಯಿಂದ ಹಾಗೂ ಸ್ಥಳೀಯರ ಮುಖಂಡರ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಹಿಡಕಲ್ ಜಲಾಶಯ ಮೂಲಕ ನೀರು ಹರಿ ಬಿಡುತ್ತಿರುವ ಪರಿಣಾಮ, ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಮುಧೋಳ ತಾಲೂಕಿನ 50 ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ನದಿಗಳಾಗಿ ಮನೆಯ ಮುಂದೆ ಹರಿಯುತ್ತಿವೆ ಆದರೆ ಕುಡಿಯಲು ನೀರೇ ಇಲ್ಲ.