ಕರ್ನಾಟಕ

karnataka

ETV Bharat / state

ಬಾದಾಮಿ ಬನಶಂಕರಿ ಜಾತ್ರೆಗೆ ನಾಟಕ ಪ್ರದರ್ಶನಗಳ ಆಕರ್ಷಣೆ - ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿಯಲ್ಲಿ ಜಾತ್ರಾ ಮಹೋತ್ಸವ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಯಾದ ನಾಟಕ ನೋಡಲು ಜನರು ವಿವಿಧೆಡೆಯಿಂದ ಆಗಮಿಸುತ್ತಾರೆ.

Badami Banshankari fair
ಬಾದಾಮಿ ಬನಶಂಕರಿ ಜಾತ್ರೆ

By

Published : Jan 22, 2020, 11:07 AM IST

ಬಾಗಲಕೋಟೆ:ಜಿಲ್ಲೆಯ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಒಂದು ತಿಂಗಳುಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ವಿಶೇಷವಾಗಿ ಈ ಜಾತ್ರೆಯಲ್ಲಿ ಕರ್ನಾಟಕದ ಮೂಲೆಮೂಲೆಯಿಂದ ಬಂದಂತಹ ನಾಟಕ ಕಂಪನಿಗಳು ನಾಟಕ ಪ್ರದರ್ಶನ ಮಾಡುವುದು ಜನಪ್ರಿಯತೆ ಪಡೆದುಕೊಂಡಿದೆ.

ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ನಡೆಯಿತ್ತುರುವ ನಾಟಕ

ಪ್ರತಿ ವರ್ಷವೂ ಈ ಸ್ಥಳದಲ್ಲಿ ಜಾತ್ರೆ ಜರುಗಲಿದ್ದು, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೆ ದೇವಿ ದರ್ಶನ ಹಾಗೂ ಪೂಜೆ ಪುನಸ್ಕಾರದಲ್ಲಿ ತೊಡಗಿ ಸಂಜೆ ನಂತರ ವಿವಿಧ ನಾಟಕಗಳ ವೀಕ್ಷಣೆಯಲ್ಲಿ ತೊಡಗುತ್ತಾರೆ.

ಈ ಬಾರಿ 10ಕ್ಕೂ ಹೆಚ್ಚು ನಾಟಕ ಕಂಪನಿಗಳು ಆಗಮಿಸಿದ್ದು, ತಿಂಗಳ ಕಾಲ ಪ್ರೇಕ್ಷಕರಿಗೆ ನಾಟಕ ಪ್ರದರ್ಶನದ ರಸದೌತಣ ಸಿಗಲಿದ.

ABOUT THE AUTHOR

...view details