ಕರ್ನಾಟಕ

karnataka

ETV Bharat / state

ಬಾಗಲಕೋಟೆ : ಕೊರೊನಾ ಹೋದ್ರೂ ನೆಟ್ಟಗಾಗಲಿಲ್ಲ ಕಲಾವಿದರ ಜೀವನ.. - ನಾಟಕ ಪ್ರದರ್ಶನ ಕಲಾವಿದರ ಸಂಕಷ್ಟ

ಬಾಗಲಕೋಟೆ ನಗರದಲ್ಲಿ ಪ್ರೇಮಾ ಗುಳೇದಗುಡ್ಡ ಎಂಬ ಹಿರಿಯ ಕಲಾವಿದೆ ಆಶಾಪೂರ ನಾಟಕ ಕಂಪನಿ ಮೂಲಕ ನಾಟಕ ಪ್ರದರ್ಶನ ನಡೆಸಿದ್ದಾರೆ. ಆದರೆ, ಇವರ ಕಂಪನಿಯಲ್ಲಿ ಸಾಕಷ್ಟು ಕಲಾವಿದರು ವಯಸ್ಸಾಗಿದ್ದವರು ಇದ್ದಾರೆ. ಕೊರೊನಾದಿಂದ ಎರಡು ವರ್ಷ ಸರಿಯಾಗಿ ನಾಟಕ ಪ್ರದರ್ಶನ ಆಗದೇ, ಆದಾಯ ಇಲ್ಲದೆ ಪರದಾಡುವಂತಾಗಿದೆ..

artists
ಕಲಾವಿದರು

By

Published : Oct 20, 2021, 11:02 PM IST

ಬಾಗಲಕೋಟೆ : ಕೊರೊನಾ ಮುಕ್ತವಾಗಿದ್ದರೂ ನಾಟಕ ಕಲಾವಿದರ ಜೀವನ ಮಾತ್ರ ಸಂಕಷ್ಟದಿಂದ ಮುಕ್ತವಾಗುತ್ತಿಲ್ಲ. ವೈರಸ್​ ಭಯದಿಂದ ಕಳೆದ ಎರಡು ವರ್ಷದಲ್ಲಿ ಸರಿಯಾಗಿ ನಾಟಕ ಕಂಪನಿಗಳು ನಡೆಯದೆ ಕಲಾವಿದರ ಜೀವನ ದುಸ್ಥರವಾಗಿದೆ.

ಸಂಕಷ್ಟಕ್ಕೆ ಸಿಲುಕಿದ ಕಲಾವಿದರ ಬದುಕು

ಈಗ ನಾಟಕ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಪೇಕ್ಷಕರು ಬರುತ್ತಿಲ್ಲ ಎಂಬ ಕೊರಗು ಇದೆ. ಇದರ ಜೊತೆಗೆ ವಯಸ್ಸಾದ ಹಿರಿಯ ಕಲಾವಿದರಿಗೆ ಮಾಶಾಸನ ಇಲ್ಲದೆ ಪರದಾಡುವಂತಾಗಿದೆ.

ಬಾಗಲಕೋಟೆ ನಗರದಲ್ಲಿ ಪ್ರೇಮಾ ಗುಳೇದಗುಡ್ಡ ಎಂಬ ಹಿರಿಯ ಕಲಾವಿದೆ ಆಶಾಪೂರ ನಾಟಕ ಕಂಪನಿ ಮೂಲಕ ನಾಟಕ ಪ್ರದರ್ಶನ ನಡೆಸಿದ್ದಾರೆ. ಆದರೆ, ಇವರ ಕಂಪನಿಯಲ್ಲಿ ಸಾಕಷ್ಟು ಕಲಾವಿದರು ವಯಸ್ಸಾಗಿದ್ದವರು ಇದ್ದಾರೆ. ಕೊರೊನಾದಿಂದ ಎರಡು ವರ್ಷ ಸರಿಯಾಗಿ ನಾಟಕ ಪ್ರದರ್ಶನ ಆಗದೇ, ಆದಾಯ ಇಲ್ಲದೆ ಪರದಾಡುವಂತಾಗಿದೆ.

ಇಂತಹ ಸಮಯದಲ್ಲಿ ಸರ್ಕಾರದಿಂದ ಬರುವ ಮಾಶಾಸನ ಸಹ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನಲೆ ಜೀವನ ನಡೆಸುವುದು ಸಂಕಷ್ಟವಾಗಿದೆ. ಪ್ರತಿ ತಿಂಗಳು ಮಾಶಾಸನ ಸರಿಯಾದ ಸಮಯಕ್ಕೆ ಬಂದರೆ ಉಪ ಜೀವನ ನಡೆಯುತ್ತದೆ. ಕಲಾವಿದರು ಬಡವರಾಗಿದ್ದು, ಮನೆ, ಮಕ್ಕಳಿಗೆ ಶಿಕ್ಷಣ ಇಲ್ಲದೆ ಸಂಕಷ್ಟ ದಲ್ಲಿ ಜೀವನ ಸಾಗಿಸುವುದು ಸಾಮಾನ್ಯವಾಗಿದೆ.

ನಾಲ್ಕು ತಿಂಗಳಗಟ್ಟಲೆ ಸರ್ಕಾರದ ಮಾಶಾಸನ ಬರಲ್ಲ. ಇದರಿಂದ ಉಪ ಜೀವನಕ್ಕೆ ತೊಂದರೆ ಆಗುತ್ತಿದೆ. ಪ್ರತಿ ತಿಂಗಳು ಸರಿಯಾದ ಸಮಯ ಮಾಶಾಸನ ಒದಗಿಸಬೇಕು. ಹಾಗೂ ವಾಸ ಮಾಡಲು ಸರ್ಕಾರದಿಂದ ಕಲಾವಿದರಿಗೆ ಮನೆ ನಿರ್ಮಿಸಿ ಕೊಡಬೇಕು ಎಂದು ಹಿರಿಯ ಕಲಾವಿದೆ ಪ್ರೇಮಾ ಗುಳೇದಗುಡ್ಡ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಓದಿ:'ಉದಾಸಿಯವರು ಡಿಕೆಶಿಗೆ ವಿಲ್ ಬರೆದು ಕೊಟ್ಟಿದ್ದಾರಾ?': ಬಿಸಿಪಾ ಪ್ರಶ್ನೆ

ABOUT THE AUTHOR

...view details