ಬಾಗಲಕೋಟೆ:ಸುಕ್ಷೇತ್ರ ಹಾಗೂ ಧಾರ್ಮಿಕ ಕೇಂದ್ರ ಎನಿಸಿರುವ ಇಳಕಲ್ ತಾಲೂಕಿನ ಸಿದ್ದನಕೊಳ್ಳ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ನಗರದ ನೇಕಾರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶರಣಪ್ಪ ಕೆಂಧೊಳಿ ಎಂಬುವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿ, 3 ಸಾವಿರ ರೂಪಾಯಿ ಹಣ, ಆಹಾರ ಧಾನ್ಯ ನೀಡಿ ಧೈರ್ಯ ತುಂಬಿದರು.
ಅನಾರೋಗ್ಯಕ್ಕೆ ತುತ್ತಾಗಿದ್ದ ನೇಕಾರರ ಮನೆಗೆ ಭೇಟಿ ನೀಡಿದ ಸಿದ್ದನಕೊಳ್ಳ ಮಠದ ಸ್ವಾಮೀಜಿ - ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿ
ಲಾಕ್ಡೌನ್ ಜಾರಿಯಾದ ಬಳಿಕ ನೇಕಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೆ ಆಹಾರ ಸಾಮಗ್ರಿಗಳ ಕೊರತೆ ಎದುರಿಸುತ್ತಿದ್ದ ಮನೆಗಳಿಗೆ ಭೇಟಿ ನೀಡಿದ ಸಿದ್ದನಕೊಳ್ಳ ಮಠದ ಸ್ವಾಮೀಜಿಗಳು, ಅನಾರೋಗ್ಯ ಪೀಡಿತರು ಶೀಘ್ರವಾಗಿ ಗುಣಮುಖರಾಗುವಂತೆ ಆಶೀರ್ವಾದ ಮಾಡಿದರು.
ಅನಾರೋಗ್ಯಕ್ಕೆ ತುತ್ತಾಗಿದ್ದ ನೇಕಾರರ ಮನೆಗೆ ಭೇಟಿ ನೀಡಿದ ಸಿದ್ದನಕೊಳ್ಳ ಮಠದ ಸ್ವಾಮಿ
ಲಾಕ್ಡೌನ್ ಜಾರಿಯಾದ ಬಳಿಕ ನೇಕಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೆ ಆಹಾರ ಸಾಮಗ್ರಿಗಳ ಕೊರತೆ ಎದುರಿಸುತ್ತಿದ್ದ ಮನೆಗಳಿಗೆ ಭೇಟಿ ನೀಡಿದ ಸಿದ್ದನಕೊಳ್ಳ ಮಠದ ಸ್ವಾಮೀಜಿಗಳು, ಅನಾರೋಗ್ಯ ಪೀಡಿತರಿಗೆ ಶೀಘ್ರ ಗುಣಮುಖರಾಗುವಂತೆ ಆಶೀರ್ವಾದ ಮಾಡಿದರು.