ಕರ್ನಾಟಕ

karnataka

ETV Bharat / state

ತಪ್ಪಿದ "ಕೈ" ಟಿಕೆಟ್​: ಬಂಡಾಯ ಸಭೆ ನಡೆಸಿದ ಡಾ ದೇವರಾಜ ಪಾಟೀಲ - ಬಾಗಲಕೋಟೆ ನವನಗರದ ಅಕ್ಷಯ ಹೊಟೇಲ್

ಬಾಗಲಕೋಟೆ ಕಾಂಗ್ರೆಸ್​ ಟಿಕೆಟ್​ ಘೋಷಣೆಯಾದ ಬೆನ್ನಲ್ಲೇ ಟಿಕೆಟ್​ ವಂಚಿತರಾದ ಡಾ. ದೇವರಾಜ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ.

Etv Bharatdr-devaraj-patil-reaction-on-congress
ತಪ್ಪಿದ "ಕೈ" ಟಿಕೆಟ್​: ಬಂಡಾಯ ಸಭೆ ನಡೆಸಿದ ಡಾ ದೇವರಾಜ ಪಾಟೀಲ

By

Published : Apr 8, 2023, 5:58 PM IST

Updated : Apr 8, 2023, 10:42 PM IST

ಟಿಕೆಟ್​ ವಂಚಿತರಾದ ಡಾ. ದೇವರಾಜ ಪಾಟೀಲ

ಬಾಗಲಕೋಟೆ:ಬಾಗಲಕೋಟೆಯಲ್ಲಿ ಕಾಂಗ್ರೆಸ್​ಗೆ ಬಂಡಾಯದ ಬಿಸಿ ಎದುರಾಗಿದೆ. ಈಗಾಗಲೇ ಹೈಕಮಾಂಡ್​ ಮಾಜಿ ಸಚಿವರಾದ ಹೆಚ್ ವೈ ಮೇಟಿ ಅವರಿಗೆ ಟಿಕೆಟ್​ ಘೋಷಣೆ ಮಾಡಿದೆ. ಈ‌ ಹಿನ್ನೆಲೆ ಕಾಂಗ್ರೆಸ್​ ಟಿಕಟ್​ ಆಕಾಂಕ್ಷಿಯಾಗಿದ್ದ ಡಾ. ದೇವರಾಜ ಪಾಟೀಲ ಅವರಿಗೆ ನಿರಾಶೆ ಉಂಟಾಗಿದ್ದು, ಬಂಡಾಯದ ಬಾವುಟ ಹಾರಿಸಲು ನಿರ್ಧರಿಸಿದ್ದಾರೆ.

ಕಳೆದ ಎರಡು ಚುನಾವಣೆಯಲ್ಲಿ ಬಾದಾಮಿ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ದೇವರಾಜ ಪಾಟೀಲ ಟಿಕೆಟ್​ ಘೋಷಣೆ ಆಗಿತ್ತು. ನಂತರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕೊನೆಯ ಘಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಬಳಿಕ ಬಾದಾಮಿಗೆ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದ ಹಿನ್ನೆಲೆಯಲ್ಲಿ ಡಾ. ದೇವರಾಜ ಪಾಟೀಲ ಬಾದಾಮಿ ಕ್ಷೇತ್ರವನ್ನು ಬಿಡುವಂತಾಗಿತ್ತು.

ಡಾ.ದೇವರಾಜ ಪಾಟೀಲ ಬಾಗಲಕೋಟೆ ನಗರದಲ್ಲಿ ಸುಮಾರು 20 ವರ್ಷಗಳಿಂದ ವೈದ್ಯಕೀಯ ಸೇವೆ ಮಾಡುತ್ತಾ ಹೆಸರುವಾಸಿಯಾಗಿದ್ದಾರೆ. ರಾಜಕೀಯ ನಂಟು ಹೊಂದಿರುವುದರಿಂದ ಬಾಗಲಕೋಟೆಯ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಹೆಚ್ ವೈ ಮೇಟಿ ಬದಲಿಗೆ ಡಾ. ದೇವರಾಜ ಪಾಟೀಲ ಅವರ ಹೆಸರು ಮುಂಚೂನೆಯಲ್ಲಿ ಇತ್ತು. ಆದರೆ ಈಗ ಟಿಕೆಟ್ ಕೈ ತಪ್ಪಿದ್ದರಿಂದ ತಮ್ಮ ಬೆಂಬಲಿಗರ ಜೊತೆ ಬಂಡಾಯ ಸಭೆ ನಡೆಸಿದ್ದಾರೆ.

ಬಾಗಲಕೋಟೆ ನವನಗರದ ಅಕ್ಷಯ ಹೋಟೆಲ್ ಸಭಾಂಗಣದಲ್ಲಿ ಡಾ. ದೇವರಾಜ ಪಾಟೀಲ ಅವರ ನೇತೃತ್ವದಲ್ಲಿ ಬಂಡಾಯ ಸಭೆ ನಡೆಸಲಾಯಿತು. ಜಿಲ್ಲಾ ಪಂಚಾಯತ್​ನ ಮಾಜಿ ಅಧ್ಯಕ್ಷರಾದ ಬಸವರಾಜ ಮೇಟಿ, ಅಬ್ದುಲ್ ರಜಾಕ, ಸಂಗಣ್ಣ ಹಂಡಿ, ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸಿದ್ದಾಪೂರ, ಅಜೀತ್ ಬಾಳಿಕಾಯಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು, ಕುರುಬ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಡಾ. ದೇವರಾಜ ಪಾಟೀಲ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯ:ಸಭೆಯಲ್ಲಿ ಪ್ರಮುಖರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಟಿಕೆಟ್ ಸಿಗದೆ ಇರುವುದು ನೋವಿನ ಸಂಗತಿಯಾಗಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯನವರು ಜಯ ಗಳಿಸಿರುವುದಕ್ಕೆ ಡಾ.ದೇಜರಾಜ ಪಾಟೀಲ ಕಾರಣರಾಗಿದ್ದರು. ಸ್ನೇಹ ಜೀವಿ, ಸಹನೆ ಇರುವ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಹೈಕಮಾಂಡ್​ ಬಿ ಫಾರ್ಮ ನೀಡಬೇಕು. ಇಲ್ಲವಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್​ನಲ್ಲಿ ಗುರುತಿಸುವ ಕಾರ್ಯ ಮಾಡಿಲ್ಲ- ಡಾ. ದೇವರಾಜ ಪಾಟೀಲ..​ ಟಿಕೆಟ್​ ವಂಚಿತರಾದ ಡಾ.ದೇವರಾಜ ಪಾಟೀಲ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದಲ್ಲಿ ಇರಲ್ಲ ಎಂದು ಸ್ಪಷ್ಟನೆ ನೀಡಿ, ಸ್ವಾಭಿಮಾನ ಇರದ ಕಡೆ ನಾನು ಇರಲ್ಲ. ಕಳೆದ ಎರಡು ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ವಾಪಸ್​ ಪಡೆದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಜಿ ಪರಮೇಶ್ವರ ಹಾಗೂ ಇತರ ಗಣ್ಯರು ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದರೂ ನನ್ನನ್ನು ಗುರುತಿಸುವ ಕಾರ್ಯ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಹೆಸರು ತೆಗೆದುಕೊಳ್ಳದಿರುವುದು, ಕಾರಿ ಇಳಿಸಿ ಹಿಂದೆ ಕಾರಿನಲ್ಲಿ ಬರುವಂತೆ ಹೇಳಿರುವುದು. ಈಗೇ ಅಪಮಾನ ಮಾಡಿರುವ ಕಾಂಗ್ರೆಸ್ ಪಕ್ಷದಲ್ಲಿ ನಾನು ಇರಲ್ಲ. ಈಗ ಸೇರಿರುವ ನನ್ನ ಅಭಿಮಾನಿಗಳು ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ರಾಜಕೀಯ ಅಂದರೆ ಸಂಘರ್ಷ ಇರುತ್ತದೆ. ಇನ್ನು ಮುಂದೆ ನಾನು ಸಹ ಸಂಘರ್ಷಕ್ಕೆ ಇಳಿಯುತ್ತೇನೆ ಎಂದರು.

ಅಭಿಮಾನಿಗಳು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎಂದು ಹೇಳಿದರೆ ಸಿದ್ಧ, ಇಲ್ಲ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಕೆಲಸ ಮಾಡಿ ಎಂದರೆ ಅದಕ್ಕೂ ಸಿದ್ಧ ಎಂದು ಹೇಳಿದರು. ನನಗೆ ಕಾಂಗ್ರೆಸ್ ‌ಪಕ್ಷದ ಮುಖಂಡರೇ ಪಕ್ಷವನ್ನು ಬಿಟ್ಟು ಹೋಗಿ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ‌ಪಕ್ಷದಲ್ಲಿ ಇರುವುದಿಲ್ಲ ಎಂದು ದೇವರಾಜ ಪಾಟೀಲ​ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ತಾಯಿ - ಮಗ: ಚುನಾವಣೆಗೆ ಸ್ಪರ್ಧಿಸಲು ಸೌರಭ್​ ಚೋಪ್ರಾ ತೀರ್ಮಾನ

Last Updated : Apr 8, 2023, 10:42 PM IST

ABOUT THE AUTHOR

...view details