ಕರ್ನಾಟಕ

karnataka

ETV Bharat / state

ರಾಜಕೀಯ ಸೇಡಿನಿಂದ ಡಿಕೆಶಿ ಬಂಧನ: ಮಾಜಿ ಸಿಎಂ ಸಿದ್ದರಾಮಯ್ಯ - ರಾಜಕೀಯ ದ್ವೇಷ

ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ನಾಶ ಮಾಡುತ್ತಿದ್ದರೆ ಬಂಧಿಸಬೇಕು. ಸಮನ್ಸ್​ಗೆ ಗೌರವ ನೀಡಿ ವಿಚಾರಣೆಗೆ ಹಾಜರಾದವರನ್ನು ಬಂಧಿಸಿರುವುದು ರಾಜಕೀಯ ದ್ವೇಷದಿಂದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

By

Published : Sep 6, 2019, 4:27 AM IST

ಬಾಗಲಕೋಟೆ:ಬಸವರಾಜ್ ಬೊಮ್ಮಾಯಿ ಯಾವಾಗ ವಕೀಲರಾಗಿ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಡಿಕೆಶಿಗೆ ಬೇಲ್​ ಯಾವಾಗ ನೀಡಬೇಕು, ಯಾವಾಗ ನೀಡಬಾರದು ಎಂಬುದನ್ನು ಕೋರ್ಟ್​ ತೀರ್ಮಾನಿಸುತ್ತದೆ. ರಾಜಕೀಯ ದ್ವೇಷದಿಂದ ಡಿಕೆಶಿ ಅವರನ್ನು ಬಂಧಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿಯೇ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ
ಜಿಲ್ಲೆಯ ಬಾದಾಮಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಸಾಕ್ಷಿಗಳನ್ನು ನಾಶ ಪಡಿಸುತ್ತಿದ್ದರೆ ಅಥವಾ ತಪ್ಪಿಸಿಕೊಳ್ಳುತ್ತಾರೆ ಎಂಬುವುದಾದರೆ ಬಂಧಿಸಬೇಕು. ಸಮನ್ಸ್​ಗೆ ಒಪ್ಪಿ ವಿಚಾರಣೆಗೆ ಹಾಜರಾದವರನ್ನು ಬಂಧಿಸಿದ್ದು, ರಾಜಕೀಯ ಹಗೆತನದಿಂದ ಎಂದು ಬಿಜೆಪಿ ಮೇಲೆ ಪರೋಕ್ಷ ದಾಳಿ ನಡೆಸಿದರು.
ಇದೇ ವೇಳೆ ಮಲಪ್ರಭೆ ನದಿ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಬಾದಾಮಿ ತಾಲೂಕಿನ ಗ್ರಾಮಗಳ ನೆರೆ ಸಂತ್ರಸ್ತರಿಗೆ, ಶಿಕ್ಷಕರು ಸಂಗ್ರಹಿಸಿದ ₹ 1 ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿದ್ದರಾಮಯ್ಯನವರ ಮೂಲಕ ತಹಶೀಲ್ದಾರಗೆ ಹಸ್ತಾಂತರಿಸಲಾಯಿತು.

ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಮೂರು ವಿದ್ಯಾರ್ಥಿಗಳಿಗೆ ಇದೇ ವೇಳೆ ಲ್ಯಾಪ್​ಟಾಪ್ ವಿತರಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕ-ಶಿಕ್ಷಕಿಯರನ್ನ ಶಾಲು ಹೊದಿಸಿ ಸಿದ್ದರಾಮಯ್ಯ ಸನ್ಮಾನಿಸಿದರು.

ABOUT THE AUTHOR

...view details