ಬಾಗಲಕೋಟೆ:ಲಾಕ್ಡೌನ್ಪರಿಣಾಮ ತೊಂದರೆಗೆ ಸಿಲುಕಿರುವ ಮಂಗಳಮುಖಿಯರಿಗೆ ಜಿಲ್ಲಾ ಪಂಚಾಯಿತಿ ಸಿಇಓ ಗಂಗೂಬಾಯಿ ಮಾನಕರ್ ಆಹಾರದ ಕಿಟ್ ವಿತರಣೆ ಮಾಡಿದರು.
ಬಾಗಲಕೋಟೆ: ಮಂಗಳಮುಖಿಯರಿಗೆ ಆಹಾರದ ಕಿಟ್ ವಿತರಿಸಿದ ಜಿ. ಪಂ. ಸಿಇಓ - ಕೊರೊನಾ ವೈರಸ್
ಬಾಗಲಕೋಟೆಯ ನವನಗರದ ಸೆಕ್ಟರ್ 6ರ ಆರ್ಟಿಓ ಕಚೇರಿ ಬಳಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 1800 ರೂಪಾಯಿಗಳ ಮೌಲ್ಯದ 5 ಕೆಜಿ ಜೋಳ,1 ಕೆಜಿ ಸಕ್ಕರೆ, ಚಹಾಪುಡಿ, ಸಾಬೂನು ಸೇರಿದಂತೆ ಇತರ ವಸ್ತುಗಳನ್ನ ಮಂಗಳಮುಖಿಯರಿಗೆ ವಿತರಣೆ ಮಾಡಲಾಯಿತು.

ನವನಗರದ ಸೆಕ್ಟರ್ 6ರ ಆರ್ಟಿಓ ಕಚೇರಿ ಬಳಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಸುಮಾರು 1800 ರೂಪಾಯಿಗಳ ಮೌಲ್ಯದ 5 ಕೆಜಿ ಜೋಳ,1 ಕೆಜಿ ಸಕ್ಕರೆ, ಚಹಾಪುಡಿ, ಸಾಬೂನು ಸೇರಿದಂತೆ ಇತರೆ ವಸ್ತುಗಳನ್ನ ವಿತರಣೆ ಮಾಡಿದರು.
ಜಿಲ್ಲೆಯಲ್ಲಿ ಒಟ್ಟು 150 ಜನ ಮಂಗಳಮುಖಿಯರು ಇದ್ದು, ಪ್ರಾಯೋಗಿಕವಾಗಿ 25 ಮಂಗಳಮುಖಿಯರಿಗೆ ವಿತರಣೆ ಮಾಡಿದರು. ಮಾರುಕಟ್ಟೆ, ಬಸ್, ರೈಲು ಸಂಚಾರ ಬಂದ್ ಆಗಿರುವ ಪರಿಣಾಮ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರಿಗೆ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಿದೆ. ಇದನ್ನು ಗಮನಿಸಿದ ಸಿಇಓ ಗಂಗೂಬಾಯಿ ಮಾನಕರ್ ಆಹಾರ ಕಿಟ್ ವಿತರಣೆ ಮಾಡಿದರು.