ಬಾಗಲಕೋಟೆ : ಐತಿಹಾಸಿಕ ಕೇಂದ್ರವಾಗಿರುವ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಗಳಲ್ಲಿ ಕೋವಿಡ್ ರೋಗ ಹಿನ್ನೆಲೆಯಲ್ಲಿ ಸ್ಮಾರಕ ವೀಕ್ಷಣೆ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಗೈಡ್ ಆಗಿ ಕೆಲಸ ಮಾಡುತ್ತಿದ್ದವರಿಗೆ ಉದ್ಯೋಗವಿಲ್ಲದೆ ಪರದಾಡುವಂತಹ ಸ್ಥಿತಿಯಿದೆ.
ಬಾಗಲಕೋಟೆಯಲ್ಲಿ ಪ್ರವಾಸಿ ಗೈಡ್ಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ - ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಪ್ರವಾಸಿ ಗೈಡ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಗೈಡ್ ವೃತ್ತಿ ಮಾಡುತ್ತಿದ್ದವರಿಗೆ ಆಹಾರ ಧ್ಯಾನ ವಿತರಣೆ ಮಾಡಲಾಯಿತು.
ಪ್ರವಾಸಿ ಗೈಡ್ಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ
ಸಿದ್ದರಾಮಯ್ಯನವರ ಕ್ಷೇತ್ರವೂ ಆಗಿರುವ ಕಾರಣ ಅವರ ಸೂಚನೆಯ ಮೇರೆಗೆ ಗೈಡ್ ವೃತ್ತಿ ಮಾಡುತ್ತಿದ್ದವರಿಗೆ ಆಹಾರ ಧ್ಯಾನ ವಿತರಣೆ ಮಾಡಲಾಯಿತು. ಸಿದ್ದರಾಮಯ್ಯನವರ ಆಪ್ತರಾಗಿರುವ ಹೊಳಬಸು ಶೆಟ್ಟರ, ಎಂ.ಬಿ. ಹಂಗರಗಿ ನೇತೃತ್ವದಲ್ಲಿ, ಪ್ರವಾಸಿಗರ ಮಾರ್ಗದರ್ಶಿಗಳ ಕುಟುಂಬದವರಿಗೆ ಕಿಟ್ ವಿತರಿಸಲಾಗಿದೆ.