ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ಮೇರೆಗೆ ಅವರ ಅಭಿಮಾನಿ ಬಳಗದ ವತಿಯಿಂದ ಬಡ ಜನತೆಗೆ ಆಹಾರ ಧ್ಯಾನಗಳ ಕಿಟ್ ವಿತರಣೆ ಮಾಡಲಾಯಿತು.
ಸಿದ್ದರಾಮಯ್ಯ ಅಭಿಮಾನಿಗಳಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ - ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೂಚನೆ ಮೇರೆಗೆ ಅವರ ಅಭಿಮಾನಿ ಬಳಗದ ವತಿಯಿಂದ ಬಡ ಜನತೆಗೆ ಆಹಾರ ಧ್ಯಾನಗಳ ಕಿಟ್ ವಿತರಣೆ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರವಾಗಿರುವ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಹೊಳಬಸು ಶೆಟ್ಟರಿಂದ ಹರಣಿ ಶಿಕಾರಿ ಕಾಲೋನಿಯ ಬಡ ಜನತೆಗೆ ಆಹಾರ ಧ್ಯಾನಗಳ ಕಿಟ್ ವಿತರಣೆ ಮಾಡಿದರು. ಹರಣಿ ಶಿಕಾರಿ ಜನಾಂಗದವರು ಪ್ರತಿ ನಿತ್ಯ ದುಡಿದು ಉಪಜೀವನ ಸಾಗಿಸುವವರು. ಕೊರೊನಾ ರೋಗದಿಂದ ಎಲ್ಲಾ ಬಂದ್ ಆಗಿರುವ ಹಿನ್ನೆಲೆ ತೊಂದರೆಗೆ ಒಳಗಾಗಿದ್ದಾರೆ.
ಇದನ್ನು ಅರಿತು ಸಿದ್ದರಾಮಯ್ಯನವರ ಬೆಂಬಲಿಗರು, ಅವರ ಗಮನಕ್ಕೆ ತಂದಾಗ ಆಹಾರ ಧಾನ್ಯ ವಿತರಣೆ ಮಾಡುವಂತೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಹರಿಣಿ ಶಿಕಾರಿ ಜನಾಂಗದ 300 ಕುಟುಂಬಗಳಿಗೆ 2 ಕೆಜಿ ಗೋಧಿ ಹಿಟ್ಟು, ಒಂದು ಕೆಜಿ ರವೆ, ಒಂದು ಕೆಜಿ ಕಡಲೆ ಬೇಳೆ, ಒಂದು ಕೆಜಿ ಬೆಲ್ಲ, ಇತರ ಸಾಮಗ್ರಿ ಕಿಟ್ಗಳನ್ನು ವಿತರಿಸಲಾಯಿತು.