ಬಾಗಲಕೋಟೆ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಬಡ ಕುಟುಂಬಗಳಿಗೆ ಭೋವಿ ಗುರುಪೀಠದ ವತಿಯಿಂದ ಸುಮಾರು ಆಹಾರ ಧಾನ್ಯಗಳ 1000 ಕಿಟ್ ವಿತರಣೆ ಮಾಡಲಾಯಿತು.
ಮೊದಲನೇ ಹಂತವಾಗಿ ನವನಗರದ ಸೆಕ್ಟರ್ ಬಡಜನಗಳಿಗೆ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವ ಅಪ್ಪಂಗಳ ಆಶ್ರಮದ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಅಗತ್ಯವಿರುವ ಜೋಳ, ಕಾಳು, ಬೇಳೆ, ಗೋಧಿ ಹಿಟ್ಟು , ಮೈದಾ ಹಿಟ್ಟು ಎಣ್ಣೆ, ಬೆಲ್ಲ, ಉಪ್ಪು, ಟಮ್ಯಾಟೊ, ಈರುಳ್ಳಿ, ಸೌತೆಕಾಯಿ, ಒಣಮೆಣಸಿನಕಾಯಿ, ಉಪ್ಪಿನಕಾಯಿ, ರವೆ, ಅವಲಕ್ಕಿ ಹಾಗೂ ಇತರೆ ಸಾಮಗ್ರಿಗಳು ಒಳಗೊಂಡ ದವಸ ಧಾನ್ಯಗಳ ಕಿಟ್ಗಳನ್ನು ವಿತರಿಸಿದರು.