ಬಾಗಲಕೋಟೆ :ಬೀರಲಿಂಗೇಶ್ವರ ದೇವರ ಗದ್ದುಗೆ ತೆಂಗಿನ ಕಾಯಿಯನ್ನ ಭಕ್ತರೊಬ್ಬರು ದಾಖಲೆ ಬೆಲೆಗೆ ಹರಾಜು ಕೂಗಿ ಹೊಸ ಇತಿಹಾಸ ಬರೆದಿದ್ದಾರೆ. ತಿಂಗಳಿನಿಂದ ಗದ್ದುಗೆಯಲ್ಲಿದ್ದ ಕಾಯಿಯನ್ನ ಜಾತ್ರೆ ಹಿನ್ನೆಲೆ ಹರಾಜು ಕೂಗಲಾಗುತ್ತದೆ. ಈ ಹರಾಜಿನಲ್ಲಿ ತಿಕೋಟಾ ಮೂಲದ ಮಹಾವೀರ್ ಎಂಬುವರು ಬರೋಬ್ಬರಿ 6.50 ಲಕ್ಷ ರೂಪಾಯಿಗೆ ಹರಾಜು ಕೂಗಿ ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಜಾತ್ರೆಯಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯುತ್ತದೆ. ಜಾತ್ರೆಯ ಬಳಿಕ ದೇವರ ಬಳಿ ಇಟ್ಟಿರುವ ಕಾಯಿಗೆ ಹರಾಜು ಕೂಗಲಾಗುತ್ತದೆ.