ಕರ್ನಾಟಕ

karnataka

ETV Bharat / state

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಮಾತೃವಿಯೋಗ.. ಸಿಎಂ ಬಿಎಸ್‌ವೈ ಸಂತಾಪ - ಪಾರ್ವತಿ ಮಕ್ತಪ್ಪ ಕಾರಜೋಳ ವಿಧಿವಶ

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳರ ತಾಯಿ ಪಾರ್ವತಿ ಮಕ್ತಪ್ಪ ಕಾರಜೋಳ ವಿಧಿವಶರಾಗಿದ್ದಾರೆ.

ಪಾರ್ವತಿ ಮಕ್ತಪ್ಪ ಕಾರಜೋಳ

By

Published : Nov 18, 2019, 11:44 PM IST

ಬಾಗಲಕೋಟೆ: ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳರ ಮಾತೋಶ್ರೀ ಪಾರ್ವತಿ ಮಕ್ತಪ್ಪ ಕಾರಜೋಳ ನಿಧನರಾಗಿದ್ದಾರೆ.

ಪಾರ್ವತಿ ಮಕ್ತಪ್ಪ(90) ಇವರು ಗೋವಿಂದ ಎಂ ಕಾರಜೋಳ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಪ್ರಮಾಣದ ಬಂಧು ಬಳಗವನ್ನ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ವಿಜಯಪುರ ತಾಲೂಕಿನ ಸ್ವಗ್ರಾಮವಾದ ಕಾರಜೋಳದಲ್ಲಿ ಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಕಾರಜೋಳ ತಾಯಿ ನಿಧನ: ಸಿಎಂ ಸಂತಾಪ

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರ ಮಾತೋಶ್ರೀಯವರಾದ ಪಾರ್ವತಿ ಮುಕ್ತಪ್ಪ ಕಾರಜೋಳ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details