ಬಾಗಲಕೋಟೆ : ಮುಳಗಡೆ ಪ್ರದೇಶ ಮೋಟಗಿ ಬಸವೇಶ್ವರ ದೇವಾಲಯ ಪಕ್ಕದಲ್ಲಿಯೇ ನಿರ್ಮಾಣ ಮಾಡಿದ್ದ ಮನೆಯನ್ನು ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿಂದು ತೆರೆವು ಮಾಡಲಾಯಿತು.
ಬಸವೇಶ್ವರ ದೇವಾಲಯದ ಅರ್ಚಕರಾದ ಮಲ್ಲಿಕಾರ್ಜುನ ಬನ್ನೂರಮಠ ಎಂಬುವರು ತಮ್ಮ ಕುಟುಂಬ ಸಮೇತ ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿನ ಪೊಳೆಯಲ್ಲಿ ಮನೆ ಮಾಡಿಕೊಂಡು ವಾಸವಾಸಗಿದ್ದಾರೆ. ಈ ಪ್ರದೇಶವು ಆಲಮಟ್ಟಿ ಹಿನ್ನೀರಿನಲ್ಲಿ ಮುಳಗಡೆ ಆಗಿತ್ತು.
ಈಗಾಗಲೇ, ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪರಿಹಾರ ಧನ ನೀಡಲಾಗಿದೆ. ಆದರೆ ಈ ಕುಟುಂಬದವರು ಹೆಚ್ಚಿನ ಪರಿಹಾರ ಧನಕ್ಕೆ ನ್ಯಾಯಾಲಯದ ಮೆಟ್ಟಲು ಏರಿದ್ದು, ಇನ್ನೂ ನ್ಯಾಯಾಲಯದಲ್ಲಿ ವಾಜ್ಯ ಇದ್ದು, ಸಂಪೂರ್ಣ ಇತ್ಯರ್ಥವಾಗಿಲ್ಲ.
ಮೋಟಗಿ ಬಸವೇಶ್ವರ ದೇವಾಲಯದ ಅರ್ಚಕ ಮನೆ ನೆಲಸಮ ಆದರೆ, ಪರಿಹಾರ ಧನ ನೀಡಿದ ಮೇಲೆ ಆ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂಬ ಕಾನೂನು ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿದೆ.
ಈ ಹಿನ್ನೆಲೆ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಪಟ್ಟಣ ಪ್ರಾಧಿಕಾರದ ಅಧ್ಯಕ್ಷರಾದ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ತೆರೆವು ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಅರ್ಚಕ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ನ್ಯಾಯಾಲಯದಲ್ಲಿ ವಾಜ್ಯ ಇರುವುದರಿಂದ ಶಾಸಕರು ತಮ್ಮ ಅಧಿಕಾರವನ್ನು ದುರೋಪಯೋಗ ಪಡಿಸಿಕೊಂಡು, ದಬ್ಬಾಳಿಕೆ ಮಾಡುತ್ತಿದ್ದಾರೆ. ನಮಗೆ ನ್ಯಾಯ ಒದಗಿಸಿಕೂಡುವವರು ಯಾರು ಎಂದು ಪ್ರಶ್ನೆ ಮಾಡಿದರು.
ಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಅರ್ಚಕರ ಕುಟುಂಬದವ ಮಧ್ಯೆ ಇರುವ ವಿವಾದ ನ್ಯಾಯಾಲಯದಲ್ಲಿದೆ. ಈಗ ತೆರೆವು ಗೊಳಿಸುವಂತಹ ಸೂಕ್ತ ಕಾಲ ಅಲ್ಲ ಎಂಬುದು ಚರ್ಚೆ ಆಗುತ್ತಿದೆ.