ಕರ್ನಾಟಕ

karnataka

ETV Bharat / state

ಕೈಕೊಟ್ಟ ಕರೆಂಟ್... ಮೊಬೈಲ್ ಟಾರ್ಚ್​​ ಬೆಳಕಲ್ಲೇ ಅಹವಾಲು ಪರಿಶೀಲಿಸಿದ ಕಾರಜೋಳ! - DCM recieved peoples problem letters

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿರುವ ವೇಳೆ ವಿದ್ಯುತ್ ಕೈ ಕೊಟ್ಟಿರುವ ಹಿನ್ನೆಲೆ ಕತ್ತಲಿನಲ್ಲಿಯೇ ಸಭೆ ನಡೆಸಿ, ಅಹವಾಲು ಸ್ವೀಕಾರಿಸಿದ ಘಟನೆ ನಡೆದಿದೆ.

ಡಿಸಿಎಂ
ಡಿಸಿಎಂ

By

Published : Feb 11, 2020, 11:05 PM IST

ಬಾಗಲಕೋಟೆ:ಡಿಸಿಎಂ ಕ್ಷೇತ್ರ ಮಾತ್ರವಲ್ಲದೇ ಇನ್ನು ಕೆಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದ ಸರಿಯಾದ ವ್ಯವಸ್ಥೆ ಇಲ್ಲದೇ, ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಎಫೆಕ್ಟ್​ ಇಂದು ಕಾರಜೋಳರಿಗೂ ತಟ್ಟಿದೆ.

ಮುಧೋಳ್ ಮತಕ್ಷೇತ್ರದ ತಿಮ್ಮಾಪುರ ಗ್ರಾಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಬಳಿಕ ಜನರಿಂದ ಅಹವಾಲು ಸ್ವೀಕರಿಸುವ ವೇಳೆ ಕರೆಂಟ್​​​​ ಇಲ್ಲದಿದ್ದರೂ, ಮೊಬೈಲ್‌ ಬೆಳಕಿನಲ್ಲೇ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಇತ್ಯರ್ಥ ಪಡಿಸಿದರು.

ಮೊಬೈಲ್​ ಟಾರ್ಚ್​​ನಲ್ಲೇ ಮನವಿ ಪತ್ರಗಳ ಪರಿಶೀಲಿಸಿದ ಡಿಸಿಎಂ

ಅಹವಾಲು ಸ್ವೀಕರಿಸುವಾಗ ವಿದ್ಯುತ್ ಸಂಪರ್ಕ ಇಲ್ಲದೆ, ಜನರು ಮೊಬೈಲ್​ ಟಾರ್ಚ್​ ನೀಡಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಸಹಕರಿಸಿದರು. ಮನವಿ ಪತ್ರ ಸ್ವೀಕರಿಸಿದ ಡಿಸಿಎಂ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಕ್ಕೆ ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details