ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ,ಸಿದ್ದರಾಮಯ್ಯ ಮಾತಿಗೆ ಡಿಸಿಎಂ ಕಾರಜೋಳ ತಿರುಗೇಟು - dcm govinda karjola outrage on kumaraswamy

ಮಂಗಳೂರು ಗಲಭೆ ಸರ್ಕಾರಿ ಪ್ರಾಯೋಜಕತ್ವ ಎಂದಿದ್ದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

govinda
ಡಿಸಿಎಂ ಗೋವಿಂದ ಕಾರಜೋಳ

By

Published : Jan 12, 2020, 11:16 PM IST

ಬಾಗಲಕೋಟೆ:ಮಂಗಳೂರು ಗಲಭೆ ಸರ್ಕಾರಿ ಪ್ರಾಯೋಜಕತ್ವ ಎಂದಿದ್ದ ಸಿದ್ದರಾಮಯ್ಯ ಹಾಗೂ ಎಲ್ಲ ಸಿಡಿ ಬಿಡುಗಡೆ ಮಾಡಿದ್ರೆ ಸರ್ಕಾರ ಬೆತ್ತಲಾಗುತ್ತೆ ಅಂದಿದ್ದ ಕುಮಾರಸ್ವಾಮಿಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಅವರ ಕಡೆ ಸಾಕ್ಷ್ಯಾಧಾರಗಳಿದ್ದರೆ ನೇರವಾಗಿ ಎನ್​​​ಕ್ವೈರಿ ಕಮಿಷನ್​​ಗೆ ಕೊಟ್ಟು ಸಾಬೀತುಪಡಿಸಲಿ ಅಂತಾ ಡಿಸಿಎಂ ಗೋವಿಂದ ಕಾರಜೋಳ ಸವಾಲು ಹಾಕಿದರು. ಸಿದ್ದರಾಮಯ್ಯ, ಹೆಚ್‌ಡಿಕೆ ಸಿಎಂ ಆಗಿದ್ದಂಥವರು. ದೇವೇಗೌಡರು ಪ್ರಧಾನಿಯಾಗಿದ್ದವರು. ಅವರ ಬಾಯಿಂದ ಇಂತಹ ಮಾತುಗಳು ಬರಬಾರದು ಅಂದ್ರು. ಪೊಲೀಸ್ರು ,ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸ ಮಾಡ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವ್ಯಾವ ಟೈಮ್‌ನಲ್ಲಿ ಏನು ಮಾಡಬೇಕೋ ಅದನ್ನು ಮಾಡ್ತಾರೆ. ಅದನ್ನು ಬೆಂಬಲಿಸಬೇಕೇ ವಿನಃ ಪೊಲೀಸರ ನೈತಿಕತೆ ಪ್ರಶ್ನೆ ಮಾಡಬಾರದು. ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಅಂತಾ ಕಿವಿಮಾತು ಹೇಳಿದ್ರು.

ಡಿಸಿಎಂ ಗೋವಿಂದ ಕಾರಜೋಳ

ಬಿಜೆಪಿಯವರು ಖಜಾನೆ ಖಾಲಿ ಮಾಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾಪ ಅವರು ಇದ್ದಾಗ ಖಜಾನೆ ತುಂಬಿಸಿ ಹೋಗಿದ್ರು ನಾವು ಖಾಲಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡೋದೊಂದೆ ಅವರ ಕೆಲಸ. ಖುರ್ಚಿ ಮೇಲೆ ಕೂರೋಕೆ ಸಾಧ್ಯವಿಲ್ಲ ಅಂತಾ ಮಾಜಿ ಸಿಎಂಗೆ ಮಾತಿನಲ್ಲೇ ತಿವಿದಿದ್ದಾರೆ.

ಮಂಗಳೂರು ಗಲಭೆ ಬಗ್ಗೆ ಇನ್ನಷ್ಟು ಸಿಡಿ ಬಿಡುಗಡೆ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ, ಮಾಡು ಅಂತ ಹೇಳಿ ಬಿಡುಗಡೆ ಮಾಡಲಿ ಯಾರು ಬೇಡ ಅಂತಾರೆ. ಯಾರು ಬಟ್ಟೆ ಉಟ್ಟಿರ್ತಾರೆ ಯಾರು ಬೆತ್ತಲಾಗ್ತಾರೆ ಗೊತ್ತಾಗುತ್ತೆ ಅಂತಾ ತಿರುಗೇಟು ಕೊಟ್ಟರು. ಸಚಿವ ಸಂಪುಟ ವಿಸ್ತರಣೆ ವಿಚಾರ ಪ್ರತಿಕ್ರಿಯಿಸಿದ ಡಿಸಿಎಂ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆ ಆಗುತ್ತದೆ. ಚುನಾವಣೆ ಹಿನ್ನೆಲೆ ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಡುವು ಇರಲಿಲ್ಲ. ಜನೇವರಿ 18 ಕ್ಕೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರುತ್ತಿದ್ದಾರೆ. ಬಂದ ಮೇಲೆ ಸಿಎಂ ಬಿಎಸ್​​ವೈ ಅಮಿತ್ ಶಾ ಜೊತೆ ಚರ್ಚೆ ಮಾಡೋದಾಗಿ ಈಗಾಗಲೇ ಹೇಳಿದ್ದಾರೆ. ಇನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪಗೆ ಸ್ವತಂತ್ರ ಸಿಗುತ್ತಿಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸದೆ ಕಾರಜೋಳ ಜಾರಿಕೊಂಡರು.

For All Latest Updates

TAGGED:

ABOUT THE AUTHOR

...view details