ಕರ್ನಾಟಕ

karnataka

ETV Bharat / state

ನೂರಕ್ಕೆ ನೂರರಷ್ಟು ಶಿಕ್ಷಣವಾದಾಗ ಮಾತ್ರ ಮೂಢನಂಬಿಕೆ ಹೋಗಬಹುದು: ಕಾರಜೋಳ - ಮೂಢನಂಬಿಕೆ ಕುರಿತು ಗೋವಿಂದ ಕಾರಜೋಳ ನ್ಯೂಸ್

ಗ್ರಹಣ, ಅಮವಾಸ್ಯೆ ಕುರಿತು ಪ್ರತಿಕ್ರಿಯಿಸಿದ ಉಪ‌ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಆಚರಣೆ, ಮೂಢನಂಬಿಕೆಗಳು ಅವರವರ ವಿಚಾರಕ್ಕೆ ಬಿಟ್ಟದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

DCM Govinda karajola
ಡಿಸಿಎಂ ಗೋವಿಂದ ಕಾರಜೋಳ

By

Published : Dec 26, 2019, 9:28 PM IST

ಬಾಗಲಕೋಟೆ: ಗ್ರಹಣ, ಅಮವಾಸ್ಯೆಯಿಂದಾಗಿ ಅಧಿಕಾರಿಗಳ ಸಭೆ ಮುಂದಕ್ಕೆ ಹಾಕಿರುವ ಪ್ರಸಂಗದ ‌ಜೊತೆಗೆ ಕಂದಾಚಾರ, ಮೂಢನಂಬಿಕೆ ಬಗ್ಗೆ ಉಪ‌ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಸವಣ್ಣನವರ ವಚನ ಹೇಳುವ ಮೂಲಕ ಪತ್ರಕರ್ತರಿಗೆ ಪ್ರವಚನ ನೀಡಿದರು.

ನೂರಕ್ಕೆ ನೂರರಷ್ಟು ಶಿಕ್ಷಣವಾದಾಗ ಮಾತ್ರ ಮೂಢನಂಬಿಕೆ ಹೋಗಬಹುದು: ಡಿಸಿಎಂ ಗೋವಿಂದ ಕಾರಜೋಳ

ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ‌ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ಅಧಿಕಾರಿಗಳ ಸಭೆ‌ ನಡೆಸಬೇಕಿತ್ತು. ಆದರೆ ಅಧಿಕಾರಿಗಳು ಗ್ರಹಣ ಹಾಗೂ ಅಮವಾಸ್ಯೆ ಕಾರಣ ಮನೆಯಲ್ಲಿ ಕೆಲಸ ಇರುತ್ತದೆಯೆಂದು ಸಭೆ ಮುಂದಕ್ಕೆ ಹಾಕಿ ಎಂದು‌ ವಿನಂತಿಸಿದ ಹಿನ್ನೆಲೆ ಜನವರಿ 3ಕ್ಕೆ ಸಭೆ‌ ಮುಂದಕ್ಕೆ ಹಾಕಲಾಗಿದೆ ಎಂದರು.

ಇದೇ ಸಮಯದಲ್ಲಿ ಗ್ರಹಣದ ಕಂದಾಚಾರದ ಬಗ್ಗೆ ಮಾತನಾಡಿ, ನಮ್ಮ ಮನೆಯಲ್ಲಿಯೂ ಆಚರಣೆ ಮಾಡುತ್ತಾರೆ. ಅದಕ್ಕೆ ಏನೂ ಹೇಳಲು‌ ಬರುವುದಿಲ್ಲ. ಆಚರಣೆ ಮಾಡುವವರಿಗೆ ನಾವು ಏನೂ ಹೇಳಲ್ಲ. ಬಸವಣ್ಣನವರು ಆಗಲೇ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಪ್ರಯತ್ನ ಪಟ್ಟರು. ಆದರೆ ಇಲ್ಲಿಯವರೆಗೆ ಆಗುತ್ತಿಲ್ಲ. ನೂರಕ್ಕೆ ನೂರರಷ್ಟು ಶಿಕ್ಷಣವಾದಾಗ ಮಾತ್ರ ಮೂಢನಂಬಿಕೆ ಹೋಗಬಹುದು. ಇದಕ್ಕೆ ಇನ್ನೂ‌ ಐವತ್ತು ವರ್ಷ ಕಾಯಬೇಕಾಗಿದೆ ಎಂದು ಬಸವಣ್ಣನವರ ವಚನಗಳ ವಿವರ ಹೇಳಿ, ಅದರರ್ಥವನ್ನೂ ಸಹ ಬಿಡಿ ಬಿಡಿಯಾಗಿ ಪ್ರವಚನದಂತೆ ತಿಳಿಸಿದರು.

ABOUT THE AUTHOR

...view details