ಕರ್ನಾಟಕ

karnataka

ETV Bharat / state

ಯುಕೆಪಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿದ ಡಿಸಿಎಂ ಗೋವಿಂದ ಕಾರಜೋಳ - BDTA function

ಯುಕೆಪಿ ಸಂತ್ರಸ್ತರಿಗೆ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹಕ್ಕುಪತ್ರಗಳನ್ನು ವಿತರಿಸಿದರು.

Bagalkot
Bagalkot

By

Published : Aug 18, 2020, 1:38 PM IST

ಬಾಗಲಕೋಟೆ:ಯುಕೆಪಿ ಯೋಜನೆಯ ಯುನಿಟ್ 2 ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿತರಿಸಿದರು.

ನಂತರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗ್ಗಡೆ ಅವರು ಬಾಗಲಕೋಟೆ ನವನಗರವನ್ನು ಚಂಡಿಘಡ ಮಾದರಿಯಲ್ಲಿ ನಿರ್ಮಿಸುವ ಕನಸನ್ನು ಹೊಂದಿದ್ದರು. ಬಿಡಿಟಿಎ ಅಧ್ಯಕ್ಷರಾಗಿರುವ ಶಾಸಕ ಡಾ. ವೀರಣ್ಣ ಚರಂತಿಮಠ ಅವರು ರಾಮಕೃಷ್ಣ ಹೆಗಡೆ ಅವರ ಕನಸನ್ನು ಸಾಕಾರಗೊಳಿಸಲಿದ್ದಾರೆ ಎಂದರು.

ಚರಂತಿಮಠ ಅವರು ಯುಕೆಪಿ, ಪುನರ್ವಸತಿ, ಪುನರ್ ನಿರ್ಮಾಣ ಕುರಿತು ಸಮಗ್ರ ಮಾಹಿತಿ ಹೊಂದಿದ್ದು, ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೇಶನ ಪಡೆದ ಸಂತ್ರಸ್ತರು ನಿವೇಶನಗಳನ್ನು ಮಾರಾಟ ಮಾಡಬಾರದು. ಯೋಜನಾಬದ್ಧವಾಗಿ ನೀಡಿದ ಈ ನಿವೇಶನಗಳು ತಮ್ಮ ಮನೆತನಕ್ಕೆ, ಮುಂದಿನ ಜನಾಂಗಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತವೆ. ಈ ನಿವೇಶನಗಳನ್ನು‌ ಮಾರಾಟ ಮಾಡಬಾರದು. ಬಾಗಲಕೋಟೆ ನಗರವನ್ನು ಮಾದರಿ ನಗರವಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು. ಕೊವಿಡ್ ಹಿನ್ನೆಲೆಯಲ್ಲಿ ಯುಕೆಪಿ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಕೋವಿಡ್ ವೈರಸ್ ಸಮಸ್ಯೆ ಇಲ್ಲದಿದ್ದರೆ ಯುಕೆಪಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ಈ ಭಾಗದ ಸ್ವರೂಪವೇ ಬದಲಾಗುತ್ತಿತ್ತು ಎಂದರು.

ಈ ಸಂದರ್ಭದಲ್ಲಿ ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ, ತಾವು ಬಿಟಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಕೈಗೊಂಡ ಕ್ರಮಗನ್ನು ವಿವರಿಸಿದರು.

ABOUT THE AUTHOR

...view details