ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಬಿಡುತ್ತಿಲ್ಲ: ಗೋವಿಂದ ಕಾರಜೋಳ

ಯಾರು ದುಷ್ಟರೆಂಬುದು ತಿಳಿದಿದ್ದು, ಅದನ್ನು ಹೇಳುವ ಧೈರ್ಯವಿಲ್ಲ ಎಂದ ಮೇಲೆ ಸಾರ್ವಜನಿಕ ರಂಗದಲ್ಲಿ ಏಕಿರುತ್ತೀರಿ ಎಂದು ಕಾಂಗ್ರೆಸ್ ಮುಖಂಡರಿಗೆ ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.

dcm govind karjol
ಡಿಸಿಎಂ ಗೋವಿಂದ ಕಾರಜೋಳ

By

Published : Aug 14, 2020, 3:24 PM IST

ಬಾಗಲಕೋಟೆ:ಕಾಂಗ್ರೆಸ್ ಪಕ್ಷದ ಶಾಸಕರ ಮನೆಯ ಮೇಲೆ ನಡೆದ ದಾಳಿಯನ್ನು ಅದೇ ಪಕ್ಷದ ಮುಖಂಡರು ಖಂಡಿಸುವಷ್ಟು ಧೈರ್ಯ ತೋರುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷ ಕಳೆದರೂ ಮತ ಬ್ಯಾಂಕ್ ಮಾಡುವುದನ್ನು ಅವರು ಬಿಡುತ್ತಿಲ್ಲ. ಇಂಥಾ ರಾಜಕಾರಣದಿಂದ ದೇಶ ಅಧೋಗತಿಗೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭವಿಷ್ಯದಲ್ಲಾದರೂ ಈ ರೀತಿಯ ಘಟನೆಗಳು ಸಂಭವಿಸಿದಾಗ ನಿಷ್ಪಕ್ಷಪಾತವಾಗಿ ಖಂಡಿಸುವ ಶಕ್ತಿ ತೋರಲಿ ಎಂದರು.

ಗೋವಿಂದ ಕಾರಜೋಳ, ಡಿಸಿಎಂ

ದುಷ್ಟರು ಯಾರೆಂಬುದನ್ನು ತಿಳಿದೂ ಕೂಡ ಅದನ್ನು ಹೇಳುವುದಕ್ಕೂ ಧೈರ್ಯ ಇಲ್ಲವಾದಲ್ಲಿ ಸಾರ್ವಜನಿಕ ರಂಗದಲ್ಲಿ ಏಕಿರುತ್ತೀರಿ?, ಈ ಘಟನೆಯಲ್ಲಿ ಯಾವುದೇ ಸಮುದಾಯದ ಹಾಗೂ ಪಕ್ಷದವರಿದ್ದರೂ ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದವರು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.

ಇದಕ್ಕೂ ಮುನ್ನ ಕಾರಜೋಳ, ನವನಗರದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಕಚೇರಿಗೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಪಕ್ಷ ಸಂಘಟನೆ ಬಗ್ಗೆ ಒತ್ತು ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಇದೇ ವೇಳೆ ಜಿಲ್ಲಾಡಳಿತ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬೆಳೆ ವಿಮಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಜಾಥಾಗೆ ಅವರು ಚಾಲನೆ ನೀಡಿದರು. ಈ ಸಂದರ್ಭಗಳಲ್ಲಿ ಶಾಸಕರಾದ ವೀರಣ್ಣ ಚರಂತಿಮಠ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details