ಕರ್ನಾಟಕ

karnataka

ETV Bharat / state

ಸಿಡಿಲು ಬಡಿದು ಮೃತ‌ ಪಟ್ಟ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಡಿಸಿಎಂ ಕಾರಜೋಳ - ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ

ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಮೃತ ಬಾಲಕನ ಪೋಷಕರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂ. ಹಣವನ್ನು ನೀಡಿದರು.

DCM Govind karjol
ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ

By

Published : Jun 29, 2020, 11:50 PM IST

ಬಾಗಲಕೋಟೆ: ಸಿಡಿಲು ಬಡಿದು ಬಾಲಕ ಮೃತ‌ ಪಟ್ಟಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.

ಲೋಕಾಪುರದಲ್ಲಿ ಸಿಡಿಲು ಬಡಿದು ಕಿರಣ ಹನಮಂತ ನಾವಿ (15) ಎಂಬುವ ಬಾಲಕ ಮೃತಪಟ್ಟಿದ್ದಾನೆ. ನಂತರ ಘಟನಾಸ್ಥಳಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂ. ನೀಡಿದರು.

ಜೊತೆಗೆ ಪ್ರಕರಣವನ್ನು ದಾಖಲಿಸಿಕೊಂಡು, ಶೀಘ್ರವಾಗಿ ಪ್ರಕೃತಿ ವಿಕೋಪ ನಿಧಿಯಡಿ 5 ಲಕ್ಷ ರೂ. ಪರಿಹಾರವನ್ನು ನೀಡಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ABOUT THE AUTHOR

...view details