ಬಾಗಲಕೋಟೆ: ಜಿಲ್ಲೆಯಲ್ಲಿ ಮಾರ್ಚ್ 21 ರಿಂದ 23ವರೆಗೆ ಹೋಳಿ ಆಚರಿಸಲಾಗುತ್ತಿದ್ದು, ದೇಶದಲ್ಲಿಯೇ ಹೋಳಿ ಆಚರಣೆಯಲ್ಲಿ ಎರಡನೇ ಸ್ಥಾನ ಪಡೆದ ಬಾಗಲಕೋಟೆ ತನ್ನದೇ ಆದ ಇತಿಹಾಸ ಹೊಂದಿದೆ. ಹಿಂದೆ ಆಚರಿಸಿದಂತೆ ಈ ಬಾರಿ ಕೂಡ ಎಲ್ಲ ಸಮುದಾಯಗಳ ಜನರ ಸಹಭಾಗಿತ್ವದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕರೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಭ್ರಮ, ಭಾವೈಕ್ಯತೆ, ಸಹೋದರತ್ವ ಬಲಿಷ್ಠಗೊಳ್ಳಲು ಇಂತಹ ಹಬ್ಬಗಳ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಾಲಕರು, ಹಿರಿಯರು, ಹೋಳಿ ಆಚರಣಾ ಸಮಿತಿಯ ಸದಸ್ಯರು ಒಗ್ಗೂಡಿ ಯುವಕರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸಂಭ್ರಮದ ಹೋಳಿ ಆಚರಣೆ ಹಾಗೂ ಗತಕಾಲದ ವೈಭವ ಮರುಕಳುಹಿಸುವಂತಾಗಬೇಕು ಎಂದರು.