ಕರ್ನಾಟಕ

karnataka

ETV Bharat / state

ಬಾಗಲಕೋಟೆ : ₹5.43 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತ ಭವನಕ್ಕೆ ಮೆರುಗು - Bagalkote latest news

ಜಿಲ್ಲಾಡಳಿತ ಭವನದ ಕಟ್ಟಡವಾಗಿ 15 ವರ್ಷಕ್ಕೂ ಮೇಲ್ಪಟ್ಟು ಆಗಿದ್ದು, ಕಟ್ಟಡದಲ್ಲಿ ಕೆಲ ದುರಸ್ಥಿ ಕಾರ್ಯ ಕೈಗೊಳ್ಳುವುದರ ಜೊತೆಗೆ ಹೊಸ ಮೆರುಗು ನೀಡಲು ನವೀಕರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ..

DC meeting
DC meeting

By

Published : Aug 31, 2020, 5:49 PM IST

Updated : Aug 31, 2020, 5:55 PM IST

ಬಾಗಲಕೋಟೆ :ಜಿಲ್ಲಾ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನದ ಕಟ್ಟಡಕ್ಕೆ ಮೆರುಗು ನೀಡುವ ನಿಟ್ಟಿನಲ್ಲಿ 5.43 ಕೋಟಿ ರೂ.ಗಳ ವೆಚ್ಚದಲ್ಲಿ ಸಂಪೂರ್ಣ ನವೀಕರಣಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಭವನದ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಭವನದ ಕಟ್ಟಡ ಮೇಲ್ಛಾವಣಿ, ವಾಟರ್‌ ಪ್ರೂಫಿಂಗ್, ಕೊಠಡಿಗಳ ಬಾಗಿಲು ಬದಲಾವಣೆ, ಶೌಚಾಲಯಗಳ ದುರಸ್ಥಿ, ನೀರಿನ ಪೈಪ್‍ಗಳ ಬದಲಾವಣೆ, ಜನರೇಟರ್ ವ್ಯವಸ್ಥೆ, ಹೊಸ ವಿದ್ಯುತ್ ವೈರ್‌ಗಳ ಅಳವಡಿಕೆ ಹಾಗೂ ಫೇವರ್ ಬ್ಲಾಕ್, ಪೇಂಟಿಂಗ್ ಸೇರಿದಂತೆ ಇತರೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಭವನದ ಕಟ್ಟಡವಾಗಿ 15 ವರ್ಷಕ್ಕೂ ಮೇಲ್ಪಟ್ಟು ಆಗಿದ್ದು, ಕಟ್ಟಡದಲ್ಲಿ ಕೆಲ ದುರಸ್ಥಿ ಕಾರ್ಯ ಕೈಗೊಳ್ಳುವುದರ ಜೊತೆಗೆ ಹೊಸ ಮೆರುಗು ನೀಡಲು ನವೀಕರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯವನ್ನು ಲೋಕೋಪಯೋಗಿ ಹಾಗೂ ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಡಳಿತ ಭವನ ನವೀಕರಣಗೊಳಿಸುವ ಕುರಿತು ಕ್ರೀಯಾ ಯೋಜನೆ ಸಿದ್ಧಪಡಸಲು ಸೂಚಿಸಿದರು.

ಸಭೆಯಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರ ಗೋಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಸೇರಿದಂತೆ ಹೆಸ್ಕಾಂ, ಭೂಸೇನಾ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Last Updated : Aug 31, 2020, 5:55 PM IST

ABOUT THE AUTHOR

...view details