ಬಾಗಲಕೋಟೆ:ತನ್ನ ಮಾವನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಸೊಸೆಯೊಬ್ಬಳು ಕಬ್ಬಿಣದ ರಾಡ್ನಿಂದ ಮಾವ ಹಾಗೂ ಅಡ್ಡ ಬಂದ ಅತ್ತೆಯನ್ನೇ ಹತ್ಯೆ ಮಾಡಿದ್ದಾರೆ.
ಲೈಂಗಿಕ ಕಿರುಕುಳ ನೀಡುತ್ತಿದ್ದ ಅತ್ತೆ-ಮಾವನನ್ನೇ ಹತ್ಯೆಗೈದ ಸೊಸೆ.. - sexual harassment
ಲೈಂಗಿಕ ಕಿರುಕುಳ ನೀಡಿದನೆಂದು ತನ್ನ ಮಾವ ಹಾಗೂ ಅತ್ತೆಯನ್ನು ಸೊಸೆಯೊಬ್ಬಳು ಹತ್ಯೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನ ಜಂಬಗಿ ಕೆ ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
daughter-in-law was murdered by sexual harassment
ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಕೆಡಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಸಿದ್ದರಾಯ ಮಲ್ಲೇಶನವರ (56) ಹಾಗೂ ಕಲಾವತಿ ಮಲ್ಲೇಶನವರ (45) ಕೊಲೆಯಾದವರು. ಗೀತಾ ಮಲ್ಲೇಶನವರ ಕೊಲೆ ಮಾಡಿರುವ ಆರೋಪಿ.
ಗೀತಾಗೆ ನಿತ್ಯ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರಿಂದ ಬೇಸತ್ತು ಗುರುವಾರ ಸಂಜೆ ಕಬ್ಬಿಣದ ರಾಡ್ನಿಂದ ತನ್ನ ಮಾವ ಸಿದ್ದರಾಯ ತಲೆಗೆ ಹೊಡೆದಿದ್ದಾಳೆ. ಬಳಿಕ ಅಡ್ಡ ಬಂದ ಅತ್ತೆಗೂ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾಳೆ ಎನ್ನಲಾಗ್ತಿದೆ. ಸ್ಥಳಕ್ಕೆ ಸಾವಳಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Last Updated : Aug 30, 2019, 11:34 AM IST