ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ದಸರಾ ಸಂಭ್ರಮ : ಮನೆಗಳಲ್ಲಿ ಗೊಂಬೆ ಕೂರಿಸಿ ಪ್ರದರ್ಶನ - ಬಾಗಲಕೋಟೆಯ ಮನೆಗಳಲ್ಲಿ ಗೊಂಬೆ ಪ್ರದರ್ಶನ

ನಮ್ಮ ಮನೆಯಲ್ಲಿ ಸುಮಾರು 40 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಬೊಂಬೆಗಳನ್ನು ಕೂರಿಸಿಸುವ ಸಂಪ್ರದಾಯವಿದೆ. ಕಳೆದ 20 ವರ್ಷದಿಂದ ಹೊಸ ಮನೆಯಲ್ಲಿ ಜಾಗ ಹೆಚ್ಚಳವಾಗಿದ್ದರಿಂದ ಅದನ್ನು ಅಚ್ಚುಕಟ್ಟಾಗಿ 7 ಹಂತದಲ್ಲಿ ಜೋಡಿಸಿ ಪ್ರದರ್ಶನ ಮಾಡುತ್ತೇವೆ..

toys exhibition in Bagalkot
ಬಾಗಲಕೋಟೆಯಲ್ಲಿ ಗೊಂಬೆ ಪ್ರದರ್ಶನ

By

Published : Oct 10, 2021, 9:09 PM IST

ಬಾಗಲಕೋಟೆ :ನಾಡಹಬ್ಬ ದಸರಾವನ್ನು ಮೈಸೂರಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅದರಂತೆ ಉತ್ತರಕರ್ನಾಟಕ ಭಾಗದಲ್ಲಿಯೂ ಆಚರಿಲಸಲಾಗುತ್ತಿದೆ. ಮನೆಗಳಲ್ಲಿ ಗೊಂಬೆಗಳ ಕೂರಿಸಿ ಸಂಭ್ರಮಿಸಲಾಗುತ್ತಿದೆ.

ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮೋಹನ ಮಹಾದೇವಪ್ಪ ಪತ್ತಾರ ಕುಟುಂಬದವರು ಸುಮಾರು 40 ವರ್ಷಗಳಿಂದ ದಸರಾ ಹಬ್ಬದಲ್ಲಿ ಬೊಂಬೆಗಳನ್ನು ಕೂರಿಸಿಕೊಂಡು ಬಂದಿದ್ದಾರೆ. ಅದರಂತೆ ಈ ಬಾರಿಯೂ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಮೂಲಕ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬಾಗಲಕೋಟೆಯಲ್ಲಿ ಗೊಂಬೆ ಪ್ರದರ್ಶನ..

ತಮ್ಮ ಪರಿಕಲ್ಪನೆ, ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಗೊಂಬೆಗಳನ್ನು ಸಂಗ್ರಹಿಸಿ, ಅವುಗಳನ್ನು ಮನೆಯ ಸ್ಥಳಾವಕಾಶವನ್ನು ನೋಡಿಕೊಂಡು ಜೋಡಿಸಿ ಶೃಂಗರಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ವೈವಿಧ್ಯಮಯ ಗೊಂಬೆಗಳು, ಮೈಸೂರು ದಸರಾ ಮೆರವಣಿಗೆಯ ಆನೆಗಳು ಸೇರಿ 200ಕ್ಕೂ ಅಧಿಕ ಸಂಖ್ಯೆಯ ಗೊಂಬೆಗಳನ್ನು ಇಟ್ಟಿದ್ದಾರೆ. ಪ್ರತಿವರ್ಷ 4 ರಿಂದ 5 ಬೊಂಬೆಗಳನ್ನು ಹೆಚ್ಚು ಮಾಡುತ್ತಾ ಬರುತ್ತಿದ್ದಾರೆ.

ಮನೆಗಳಲ್ಲಿ ಸ್ಥಳಾವಕಾಶ ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳನ್ನು ಇಡಲಾಗುತ್ತದೆ. ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸುತ್ತಾರೆ.

ಪ್ರತಿವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಹಾಗಾಗಿ, ಪ್ರತಿಯೊಬ್ಬರು ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ. ಇತ್ತೀಚಿಗೆ ಹಳೆ ಸಂಪ್ರದಾಯದ ಬೊಂಬೆಗಳ ಜೊತೆ ಆಧುನಿಕ ಸ್ಫರ್ಶ ನೀಡಲಾಗುತ್ತಿದೆ. ಮರದ, ಮಣ್ಣಿನ ಗೊಂಬೆ ಜೊತೆಗೆ ಆಧುನಿಕ ಬೊಂಬೆಗಳನ್ನು ಪ್ರದರ್ಶನದಲ್ಲಿ ಬಳಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಗೊಂಬೆ ಪ್ರದರ್ಶನ

ನಮ್ಮ ಮನೆಯಲ್ಲಿ ಸುಮಾರು 40 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಬೊಂಬೆಗಳನ್ನು ಕೂರಿಸಿಸುವ ಸಂಪ್ರದಾಯವಿದೆ. ಕಳೆದ 20 ವರ್ಷದಿಂದ ಹೊಸ ಮನೆಯಲ್ಲಿ ಜಾಗ ಹೆಚ್ಚಳವಾಗಿದ್ದರಿಂದ ಅದನ್ನು ಅಚ್ಚುಕಟ್ಟಾಗಿ 7 ಹಂತದಲ್ಲಿ ಜೋಡಿಸಿ ಪ್ರದರ್ಶನ ಮಾಡುತ್ತೇವೆ.

ನಮ್ಮ ಪರಂಪರೆ, ಸಂಸ್ಕೃತಿ ಉಳಿದು ಬೆಳೆಯಲಿ ಎಂಬುದು ನಮ್ಮ ಆಶಯ. ಪ್ರದರ್ಶನ ನೋಡಲು ನಮ್ಮ ಆಪ್ತರು, ಸಂಬಂಧಿಕರು ಬಂದು ನೋಡಿ ಖುಷಿ ಪಡುತ್ತಾರೆ ಎಂದು ವಂದನಾ ಮೋಹನ ಪತ್ತಾರ್ ಸಂತಸ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿಂದು 406 ಮಂದಿಗೆ COVID ದೃಢ: 10 ಸೋಂಕಿತರ ಸಾವು

ABOUT THE AUTHOR

...view details