ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಉರಗ ತಜ್ಞನೇ ಹಾವು ಕಡಿತಕ್ಕೆ ಬಲಿ - Daniel Newton died by snake bite

ಬಾಗಲಕೋಟೆ ನಗರದ ಉರಗ ತಜ್ಞ ಎಂದೇ ಖ್ಯಾತಿಯಾಗಿದ್ದ ಡ್ಯಾನಿಯಲ್ ನ್ಯೂಟನ್ ಇಂದು ಹಾವು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡ್ಯಾನಿಯಲ್‌ ಕಳೆದ‌ ಹತ್ತಾರು ವರ್ಷಗಳಿಂದ‌ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಸೇವೆ ಎಂದುಕೊಂಡು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುತ್ತಿದ್ದರು.

ಡ್ಯಾನಿಯಲ್ ನ್ಯೂಟನ್ ಹಾವು ಕಡಿದು ಸಾವು
ಡ್ಯಾನಿಯಲ್ ನ್ಯೂಟನ್ ಹಾವು ಕಡಿದು ಸಾವು

By

Published : Dec 15, 2020, 3:40 PM IST

Updated : Dec 15, 2020, 4:39 PM IST

ಬಾಗಲಕೋಟೆ:ನಗರ ಸೇರಿದಂತೆ ವಿವಿಧ ಕಡೆಯ ಮನೆ, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳ‌ಲ್ಲಿ ಹಾವು ಇದ್ದರೆ ಫೋನ್​​ ಮಾಡಿದ ತಕ್ಷಣ ಅಲ್ಲಿಗೆ ಹೋಗಿ, ಹಾವು ಹಿಡಿಯುತ್ತಿದ್ದ ನಗರದ ಉರಗ ತಜ್ಞರೆಂದೇ ಖ್ಯಾತಿಯಾಗಿದ್ದ ಡ್ಯಾನಿಯಲ್ ನ್ಯೂಟನ್ ಇಂದು ಹಾವು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉರಗ ತಜ್ಞನೇ ಹಾವು ಕಡಿತಕ್ಕೆ ಬಲಿ

ಡ್ಯಾನಿಯಲ್‌ ಕಳೆದ‌ ಹತ್ತಾರು ವರ್ಷಗಳಿಂದ‌ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಸೇವೆ ಎಂದುಕೊಂಡು ಯಾರಾದರೂ ಕರೆ ‌ಮಾಡಿದ ತಕ್ಷಣ ಸ್ಥಳಕ್ಕೆ ಹೋಗಿ ಹಾವು ಹಿಡಿಯುತ್ತಿದ್ದರು. ಇಂದು ಡ್ಯಾನಿಯಲ್ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಹಾವು ಕಚ್ಚಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸುಕೊಂಡಿದ್ದರು.

ಓದಿ: ಆನೆ ದಂತದ ಬ್ರಾಸ್ಲೈಟ್, ಹುಲಿ ಉಗುರು ಮಾರಾಟ ಮಾಡುತ್ತಿದ್ದವ ಅಂದರ್

ಇದಲ್ಲದೇ ಕಳೆದ ಎರಡು ತಿಂಗಳ ಹಿಂದೆ ಮದುವೆ ಕೂಡ ಆಗಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿ ನಗರ ಹಾಗೂ ಸುತ್ತಮುತ್ತಲಿನ ಜನ ದುಃಖ ವ್ಯಕ್ತಪಡಿಸಿದ್ದಾರೆ. ಹಾವು ಕಡಿದ ಸುದ್ದಿ ಮನೆಯವರಿಗೆ ತಲುಪುತ್ತಿದ್ದಂತೆ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಡ್ಯಾನಿಯಲ್ ನ್ಯೂಟನ್ ದೇಹದಾನ ಮಾಡಿದ್ದಾರೆ.

Last Updated : Dec 15, 2020, 4:39 PM IST

ABOUT THE AUTHOR

...view details